ಉದಯವಾಹಿನಿ, ನ್ಯೂಯಾರ್ಕ್: ಅಮೆರಿಕದ H-1B ವೀಸಾ ಅರ್ಜಿ ಶುಲ್ಕ ನವೀಕರಣ ಮಾಡಲಾಗಿದ್ದು, ಅದರ ಶುಲ್ಕವನ್ನು 10 ಸಾವಿರ ಡಾಲರ್ ಅಂದರೆ, 90 ಲಕ್ಷ ರೂ.ಗಳಷ್ಟು ಏರಿಕೆ ಮಾಡಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಅವರು ಅಮೆರಿಕದ ಪೌರತ್ವಕ್ಕೆ ಸಂಭಾವ್ಯ ಮಾರ್ಗವಾಗಿರುವ 1 ಮಿಲಿಯನ್ ಗೋಲ್ಡ್ ಕಾರ್ಡ್ ವೀಸಾವನ್ನು ಬಿಡುಗಡೆ ಮಾಡಿದರು.
H-1B ವೀಸಾ ಶುಲ್ಕದ ಗಣನೀಯ ಪ್ರಮಾಣದ ಏರಿಕೆಯು ಅಮೆರಿಕದಲ್ಲಿರುವ ಭಾರತೀಯ ವೃತ್ತಿಪರರ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಕಾರಣ ಎಚ್-1ಬಿ ವೀಸಾ ಹೊಂದಿರುವ ಲಕ್ಷಾಂತರ ಜನರು ಅಮೆರಿಕದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ದತ್ತಾಂಶದ ಪ್ರಕಾರ 2024ರಲ್ಲಿ 2,07,000 ಭಾರತೀಯರು ಈ H-1B ವೀಸಾ ಪಡೆದಿದ್ದಾರೆ. ನವೀಕರಣಗೊಂಡ H-1B ವೀಸಾದ ಪ್ರಸ್ತುತ ವೆಚ್ಚ ಹೀಗಿದೆ: ನೋಂದಣಿ ಶುಲ್ಕ 215 ಡಾಲರ್, ಫೈಲಿಂಗ್ 460 ಡಾಲರ್, ವಂಚನೆ ವಿರೋಧಿ 500 ಡಾಲರ್ ಮತ್ತು ಹೆಚ್ಚುವರಿ ಉದ್ಯೋಗದಾತರ ಶುಲ್ಕ 4,000 ಡಾಲರ್ ಆಗಿದ್ದು, ಇದು ಕಂಪನಿಯ ಗಾತ್ರ ಮತ್ತು ಕಾರ್ಯಪಡೆಯ ಸಂಯೋಜನೆಯ ಮೇಲೆ ಅವಲಂಬಿತವಾಗಿರಲಿದೆ. ಇದೀಗ ಈ ವಾರ್ಷಿಕ ಶುಲ್ಕವನ್ನು ಹೆಚ್ಚಳ ಮಾಡಿರುವುದು ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿರುವವರು ಅಮೆರಿಕದ ಹೊರಗಿನಿಂದ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳ ಮೇಲೆ ಪ್ರಮುಖ ಪರಿಣಾಮ ಬೀರಲಿದೆ. ವಲಸೆ ತಡೆ ಜೊತೆಗೆ ಹೆಚ್ಚು ಕೌಶಲ್ಯಪೂರ್ಣ ವಿದೇಶಿ ಕೆಲಸಗಾರರು ಮತ್ತು ಹೂಡಿಕೆದಾರರಿಗಾಗಿ ಮಾತ್ರ ಹೆಚ್ಚಿನ ಆದ್ಯತೆ ನೀಡಲು ಈ ವೀಸಾ ವ್ಯವಸ್ಥೆಯನ್ನು ಪುನರಚಿಸಲಾಗಿದೆ.
ಏನಿದು ಎH-1B ವೀಸಾ: ಅಮೆರಿಕದ ಕಂಪನಿಗಳಲ್ಲಿ ಕೌಶಲ್ಯಯುತ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿ ಪಡೆದವರಿಗೆ ಕೆಲಸದ ಅವಕಾಶವನ್ನು ಕಡಿಮೆ ವೇತನದಲ್ಲಿ ಪಾವತಿಗೆ ಈ ವೀಸಾ ಅವಕಾಶ ಮಾಡಿಕೊಡುತ್ತದೆ. ಈ ವೀಸಾ ಕಾರ್ಮಿಕ ರಕ್ಷಣೆಗೆ ಕಡಿಮೆ ಅವಕಾಶ ಹೊಂದಿದ್ದು, 1991ರಲ್ಲಿ ಇದನ್ನು ಪರಿಚಯಿಸಲಾಯಿತು ಎಂದು ವಿಮರ್ಶಕರು ತಿಳಿಸಿದ್ದಾರೆ. ಈ ವೀಸಾಗಳನ್ನು ಲಾಟರಿ ವ್ಯವಸ್ಥೆಯ ಮೂಲಕ ವಿತರಿಸಲಾಗುತ್ತಿತ್ತು. ಈ ವರ್ಷ, ಅಮೆಜಾನ್ 10,000ಕ್ಕೂ ಹೆಚ್ಚು H-1B ವೀಸಾಗಳನ್ನು ಪಡೆದಿದೆ. ನಂತರದ ಸ್ಥಾನದಲ್ಲಿ ಟಾಟಾ ಕನ್ಸಲ್ಟೆನ್ಸಿ, ಮೈಕ್ರೋಸಾಫ್ಟ್, ಆ್ಯಪಲ್ ಮತ್ತು ಗೂಗಲ್ ಇವೆ. ಯುಸಿಐಎಸ್ ಪ್ರಕಾರ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅತಿ ಹೆಚ್ಚು H-1B ಕಾರ್ಮಿಕರಿದ್ದಾರೆ.
