ಉದಯವಾಹಿನಿ, ಬೆಂಗಳೂರು: ಸಾಮಾಜಿಕ, ಆರ್ಥಿಕ ಸಮೀಕ್ಷೆ ಕಾರ್ಯವನ್ನು ಶಿಕ್ಷಕ ವರ್ಗ ಉತ್ತಮವಾಗಿ ನಡೆಸಿಕೊಡಲಿದೆ. ಶಿಕ್ಷಕರ ವಿಚಾರದಲ್ಲಿ ಬಿಜೆಪಿ ಗೊಂದಲಗಳನ್ನು ಮೂಡಿಸುವ ಕೆಲಸ ಮಾಡಬಾರದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಮೀಕ್ಷೆ ಮಾಡುವುದು ಅಗತ್ಯ. ವಿವಿಧ ಸಮುದಾಯಗಳ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ತಿಳಿದುಕೊಳ್ಳಬೇಕಾಗುತ್ತದೆ. ಶಿಕ್ಷಕರನ್ನು ಬಳಸದ ಹೊರತು ಬೇರೆ ಪರ್ಯಾಯ ವ್ಯವಸ್ಥೆ ಇಲ್ಲ. ಅದಕ್ಕಾಗಿಯೇ ಶಾಲಾ ಅವಧಿ ಬದಲು ರಜೆ ವೇಳೆ ಶಿಕ್ಷಕರನ್ನು ಸರ್ವೆಗೆ ಬಳಸಿಕೊಳ್ಳುತ್ತಿದ್ದೇವೆ. ಬಿಜೆಪಿಯವರು ಗಣೇಶ ಹಬ್ಬ ದಲ್ಲಿ ಗಲಾಟೆ ಹಬ್ಬ ಮಾಡ್ತಾರೆ, ಬಿಜೆಪಿಯವರು ಹೇಳೋದೆಲ್ಲವೂ ಸುಳ್ಳು ಎಂದು ಹೇಳಿದರು.
ಬಿಜೆಪಿ ಕಾಲದಲ್ಲೂ ಶಿಕ್ಷಕರ ವಲಯದ ಮೇಲೆ ಅನ್ಯ ಕೆಲಸಗಳ ಒತ್ತಡ ಇರಲಿಲ್ಲವಾ? ಶಿಕ್ಷಕರ ಮೇಲೆ ಅನ್ಯ ಕೆಲಸಗಳ ಒತ್ತಡ ಇದೆ ಎಂದು ಒಪ್ಪಿಕೊಳ್ಳುತ್ತೇವೆ, ಆದರೆ ಸಮೀಕ್ಷೆ ಅರ್ಥಪೂರ್ಣವಾಗಿ ಆಗಬೇಕು. ಇದು ಅಗತ್ಯವಾಗಿ ನಡೆಯಬೇಕಿರುವ ಬೆಳವಣಿಗೆ. ಜನ ಕೂಡಾ ಇದಕ್ಕೆ ಸಹಕಾರ ಕೊಡಬೇಕು. ಕೇಂದ್ರ ಸರ್ಕಾರವೂ ಶಿಕ್ಷಕರನ್ನೇ ಬಳಸಿಕೊಂಡು ಜನಗಣತಿ ಮಾಡೋದು ಎಂದರು.

Leave a Reply

Your email address will not be published. Required fields are marked *

error: Content is protected !!