ಉದಯವಾಹಿನಿ, ಇಂದೋರ್: ಹಾಡಹಗಲೇ 12ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು,  ಗಂಧ್ವಾನಿ ಬಸ್ ನಿಲ್ದಾಣ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಘಟನೆಯು ಜನರಲ್ಲಿ ಭಯಭೀತ ಮತ್ತು ಅಪನಂಬಿಕೆ ಮೂಡಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಹುಡುಗಿಯು ಎಟಿಎಂ ಬಳಿ ನಿಂತಿದ್ದಾಗ ಮಹೀಂದ್ರಾ ಬೊಲೆರೊ ಇದ್ದಕ್ಕಿದ್ದಂತೆ ಆಕೆಯ ಬಳಿ ನಿಂತಿದೆ. ಮೂವರು ಪುರುಷರು ಹೊರಗೆ ಹಾರಿ, ಆಕೆಯ ಬಾಯಿ ಮುಚ್ಚಿ, ವಾಹನಕ್ಕೆ ಎಳೆದುಕೊಂಡು ಹೋಗಿ ಪರಾರಿಯಾಗಿದ್ದಾರೆ ಕೂಡಲೇ ಅಲ್ಲದ್ದ ಸ್ಥಳೀಯರೆಲ್ಲಾ ಸೇರಿ ಬೈಕ್‌ಗಳು ಮತ್ತು ಕಾರುಗಳಲ್ಲಿ ಅವರ ವಾಹನವನ್ನು ಬೆನ್ನಟ್ಟಿದರು. ಅಪಹರಣಕಾರರ ವಾಹನ ಅಂಬಾಪುರ ರಸ್ತೆ ತಲುಪುತ್ತಿದ್ದಂತೆ, ಅದನ್ನು ತಡೆದರು. ಇದರಿಂದಾಗಿ ಆರೋಪಿಗಳು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದರು. ಸುಮಾರು 20 ಕಿಲೋಮೀಟರ್‌ಗಳಷ್ಟು ದೂರ ಅಪಹರಣಕಾರರ ವಾಹನವನ್ನು ಸ್ಥಳೀಯರು ಬೆನ್ನಟ್ಟಿದ್ದಾರೆ. ಈ ವೇಳೆ ವೇಗವಾಗಿ ವಾಹನ ಚಲಾಯಿಸಿದ ಕಿಡ್ನಾಪರ್ಸ್, ಹಳ್ಳಿಗಳು ಮತ್ತು ಹೊಲಗಳಲ್ಲಿ ಎಲ್ಲೆಂದರಲ್ಲಿ ತಮ್ಮ ವಾಹನವನ್ನು ನುಗ್ಗಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!