ಉದಯವಾಹಿನಿ, ಮಿಲನ್‌: ಗಾಜಾದ ಮೇಲಿನ ಇಸ್ರೇಲ್‌ ದಾಳಿ ಹಾಗೂ ಪ್ಯಾಲಸ್ತೀನ್‌ಗೆ ಬೆಂಬಲ ಸೂಚಿಸದ್ದಕ್ಕಾಗಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯ ತೀವ್ರ ಬಲಪಂಥೀಯ ಸರ್ಕಾರದ ನಿರ್ಧಾರದ ವಿರುದ್ಧ ಪ್ಯಾಲಸ್ತೀನ್‌ ಪರ ಹೋರಾಟಗಾರರು ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ ಇಟಲಿಯ ಹಲವಾರು ನಗರಗಳಲ್ಲಿ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು . ಗಾಜಾದಲ್ಲಿ ಪ್ಯಾಲಸ್ತೀನ್‌ಯನ್ನರ ಸಾಮೂಹಿಕ ಹತ್ಯೆಗಳ ವಿರುದ್ಧ ಕಾರ್ಮಿಕ ಸಂಘಗಳು ಕರೆ ನೀಡಿದ್ದ ‘ಎಲ್ಲವನ್ನೂ ನಿರ್ಬಂಧಿಸೋಣ’ ಎಂಬ ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಈ ಪ್ರದರ್ಶನಗಳು ನಡೆದವು.

ಮಿಲನ್‌ನ ಸೆಂಟ್ರಲ್ ಸ್ಟೇಷನ್‌ನಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಕಪ್ಪು ಬಟ್ಟೆ ಧರಿಸಿ ಪ್ಯಾಲಸ್ತೀನ್‌ ಧ್ವಜವನ್ನು ಬೀಸುತ್ತಿದ್ದ ಪ್ರತಿಭಟನಾಕಾರರ ಗುಂಪು ಕಂಬವನ್ನು ಬಳಸಿ ನಿಲ್ದಾಣದ ಕಿಟಕಿಯನ್ನು ಒಡೆದು ಪೊಲೀಸರ ಮೇಲೆ ಕುರ್ಚಿಯನ್ನು ಎಸೆದರು. ಈ ಘರ್ಷಣೆಯಲ್ಲಿ 60 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡರು. ಮಿಲನ್‌ನಲ್ಲಿ 10 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!