ಉದಯವಾಹಿನಿ, ಬೆಂಗಳೂರು: ಹೆಣ್ಣನ್ನು ಅತಿ ಹೆಚ್ಚು ಗೌರವಿಸುವ ಪುಣ್ಯ ನಾಡು ನಮ್ಮದು ಅಂತಲೇ ಹೆಮ್ಮೆಯಿಂದ ಬೆನ್ನುತಟ್ಟಿಕೊಳ್ಳುತ್ತೇವೆ. ಶತಮಾನಗಳ ಇತಿಹಾಸ, ಪುರಾಣ ಕಥನ, ಮಿಥ್ಯೆಗಳಲ್ಲೂ ಸಹ ಇದನ್ನು ಗುರುತಿಸುತ್ತೇವೆ. ಹೆಣ್ಣು ಮಕ್ಕಳ ಶಿಕ್ಷಣ, ಪೌಷ್ಟಿಕತೆ, ಆರೋಗ್ಯ ಮತ್ತು ಜೀವನೋಪಾಯದ ಮಾರ್ಗಗಳನ್ನು ಹಸನುಗೊಳಿಸಲು ನೂರಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ʻಬೇಟಿ ಬಚಾವೋ ಬೇಟಿ ಪಢಾವೋʼ ಕೂಡ ಒಂದು. ಹೀಗಿದ್ದೂ ಹೆಣ್ಣುಮಕ್ಕಳ ಭ್ರೂಣ ಹತ್ಯೆ ಮತ್ತೊಂದೆಡೆ ಅವ್ಯಾಹತವಾಗಿ ನಡೆಯುತ್ತಿದೆ. ಗಂಡು ಮಗುವಿನ ಮೇಲಿನ ಆದ್ಯತೆ, ಹೆಣ್ಣುಮಕ್ಕಳ ಕುರಿತಾದ ತಾರತಮ್ಯ, ಸಾಮಾಜಿಕ ಕಟ್ಟುಪಾಡು, ಶಿಕ್ಷಣದ ಕೊರತೆಯಂತಹ ಕಾರಣಗಳಿಂದ ತಾಯಿ ಗರ್ಭದಲ್ಲಿರುವ ಹೆಣ್ಣು ಭ್ರೂಣವನ್ನ ಅಕ್ರಮವಾಗಿ ಲಿಂಗ ಪರೀಕ್ಷೆ ನಡೆಸಿ ಕೊಲ್ಲಲಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಮಂಡ್ಯದಲ್ಲಿ ಅಕ್ರಮವಾಗಿ ಭ್ರೂಣಹತ್ಯೆ ಮಾಡುತ್ತಿದ್ದ ಜಾಲವೊಂದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಹೊಸ ಅವತಾರದಲ್ಲಿ ಭ್ರೂಣ ಹತ್ಯೆ ವ್ಯವಸ್ಥಿತವಾಗಿ ನಡೆಯುತ್ತಿದ್ದದ್ದು ಕಂಡುಬಂದಿದೆ. ಕರ್ನಾಟಕದ ಕೆಲವು ಮಹಿಳೆಯರು ನೆರೆಯ ರಾಜ್ಯದಲ್ಲಿ ಭ್ರೂಣ ಹತ್ಯೆ ಮಾಡಿಸಿಕೊಳ್ಳುತ್ತಿದ್ದದ್ದು ಆರೋಗ್ಯ ಇಲಾಖೆ ಅಧಿಕಾರಿಗಳ ಕುಟುಕು ಕಾರ್ಯಾಚರಣೆ ವೇಳೆ ಬಟಾ ಬಯಲಾಗಿದೆ.

Leave a Reply

Your email address will not be published. Required fields are marked *

error: Content is protected !!