ಉದಯವಾಹಿನಿ, ಟಿಪ್ಸ್: ನೀವು ಪರೀಕ್ಷೆಗೆ ಸಿದ್ದವಾಗುತ್ತಿದ್ದಾರೆ ಎಂದರೇ ಮೊದಲು ಟೈಮ್ ಟೇಬಲ್ ಹಾಕಿಕೊಳ್ಳುವುದು ಉತ್ತಮ. ಯಾವ ವಿಷಯಕ್ಕೆ ಎಷ್ಟು ಸಮಯ ನೀಡಬೇಕು ಯಾವ ವಿಷಯದ ಮೇಲೆ ಎಷ್ಟು ಅವಧಿ ಓದಬೇಕು, ಇತರ ಚಟುವಟಿಕೆಗಳಿಗೆ ಎಷ್ಟು ಸಮಯ ನೀಡಬೇಕು ಎಂಬ ಟೈಮ್ ಟೇಬಲ್ ಹಾಕಿಕೊಂಡು ಓದಲು ಪ್ರಾರಂಭಿಸಿ.

ಹೀಗೆ ಮಾಡಿ ಒಳ್ಳೆ ಮಾರ್ಕ್ಸ್ ಬರುತ್ತೆ!

1) ಏಕಾಗ್ರತೆ: ಈಗಂತೂ ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ ಟಿವಿ ಯುಗ. ಸದ್ಯದ ಮಟ್ಟಿಗೆ ಅಂದರೆ ಪರೀಕ್ಷೆ ಮುಗಿಯುವರೆಗೆ ಅದಕ್ಕೆಲ್ಲಕ್ಕೂ ವಿದಾಯ ಹೇಳಿ ಬಿಡಿ. ಮನೆಯವರಿಗೂ ನಿಮ್ಮನ್ನು ಡಿಸ್ಟರ್ಬ್‌ ಮಾಡದಂತೆ ಹೇಳಿ. ಒಂದೇ ಸ್ಥಳದಲ್ಲಿ ಕುಳಿತುಕೊಂಡು ಆ ವಾತಾವರಣಕ್ಕೆ ಮನಸ್ಸು ಹೊಂದಿಕೊಳ್ಳುವಂತೆ ನೋಡಿಕೊಂಡು ಅಲ್ಲೇ ಅಧ್ಯಯನ ಮಾಡಿ. ಸಾಧ್ಯವಾದರೆ ನಿಮ್ಮ ಮನಸ್ಥಿತಿಗೆ ಹೊಂದುವ ಗೆಳೆಯರೊಂದಿಗೆ ಗ್ರೂಪ್‌ ಸ್ಟಡಿ ಬೇಕಾದರೆ ಮಾಡಿ.

2) ಸಮಯ ನಿರ್ವಹಣೆ: ಪರೀಕ್ಷೆಗೆ ಓದುವ ಸಮಯದಲ್ಲಿ ನೀವು ಹೇಗೆ ಯಾವ ವಿಷಯಕ್ಕೆ ಎಷ್ಟು ಸಮಯ ಕೊಡುತ್ತೀರಾ ಎಂಬುದು ಬಹುಮುಖ್ಯ. ಯಾವ ವಿಷಯಕ್ಕೆ ಎಷ್ಟು ಸಮಯ ಕೊಡುತ್ತೀರಾ ಎಂಬುದನ್ನು ನಿರ್ಧಾರ ಮಾಡಿಕೊಂಡು ಓದಿ. ದೀರ್ಘಾವಧಿ ಯಾವುದು ನಿಮಗೆ ಯಾವ ವಿಷಯದ ಮೇಲೆ ಆಸಕ್ತಿ ಬರುವಂತೆ ಮಾಡಬಹುದು. ಅಲ್ಲದೇ ಓದುವ ಸಮಯದಲ್ಲಿ ಸಮಯವನ್ನು ಹೇಗೆ ನಿರ್ವಹಣೆ ಮಾಡುತ್ತೀರಾ ಎಂಬುದನ್ನು ಕಲಿಯಿರಿ.

3) ಟಿಪ್ಪಣಿಗಳನ್ನು ತಯಾರಿಸಿ: ನೀವು ಓದುವ ಸಮಯದಲ್ಲಿ ಕೇವಲ ಓದು ಕೊಂಡುಹೋಗುವ ಅಭ್ಯಾಸವನ್ನು ಇಟ್ಟುಕೊಳ್ಳಬೇಡಿ. ನೀವು ಏನು ಓದುತ್ತಿರುವ ಅದರಲ್ಲಿ ಕೆಲವೊಂದು ಟಿಪ್ಪಣಿ ಅಂಶಗಳನ್ನು ಬರೆದಿಟ್ಟುಕೊಳ್ಳಿ. ಸಮಯ ಸಿಕ್ಕಾಗಲೆಲ್ಲಾ ಈ ಟಿಪ್ಪಣಿ ಅಂಶಗಳ ಕಡೆಗೆ ಕಣ್ಣಾಡಿಸುವುದು ರಿಂದ ನಿಮಗೆ ಆ ವಿಷಯ ಸದಾ ನೆನಪಿನಲ್ಲಿ ಉಳಿಯುತ್ತದೆ.

4) ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ನೋಡಿ: ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ಹಲವು ವರ್ಷದ ಪ್ರಶ್ನೆಗಳು ಪುನರಾವರ್ತನೆ ಯಾಗಿರುತ್ತದೆ. ಹೀಗಾಗಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಹಿಂದಿನ ಹಲವು ವರ್ಷಗಳ ಪ್ರಶ್ನೆಪತ್ರಿಕೆಯನ್ನು ನೋಡಿ ಅಭ್ಯಾಸಮಾಡಿದರೆ ಪರೀಕ್ಷೆ ಸಮಯದಲ್ಲಿ ಅದು ಉಪಯೋಗಕ್ಕೆ ಬರಲಿದೆ.

5) ಪರೀಕ್ಷೆ ಆರಂಭಕ್ಕೆ ಕೆಲವೇ ಸಮಯ ಇರುವಾಗ ಓದಬೇಡಿ: ಕೆಲವರು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆಗೆ ಕೆಲವೇ ಕೆಲವು ಗಂಟೆಗಳ ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಆದರೆ ಹೀಗೆ ಮಾಡುವುದರಿಂದ ನಿಮಗೆ ನೆನಪಿರುವ ವಿಷಯವು ಮರೆತು ಹೋಗುವ ಸಾಧ್ಯತೆಯಿರುತ್ತದೆ. ಪರೀಕ್ಷೆಗೆ ಕೆಲವು ಗಂಟೆಗಳು ಉಳಿದಿರುವಾಗ ಆದಷ್ಟು ನೀವು ಓದುವುದನ್ನು ನಿಲ್ಲಿಸಿ ನಿಮ್ಮ ಮನಸ್ಸನ್ನೂ ಏಕಾಗ್ರತೆಯಿಂದ ಇಟ್ಟುಕೊಳ್ಳಿ.

6) ಭಯಪಡಬೇಡಿ: ಕೆಲವು ಮಕ್ಕಳಿಗೆ ಪರೀಕ್ಷೆ ಅಂದರೆ ಭಯ.. ಹೀಗಾಗಿ ಮಕ್ಕಳು ಪರೀಕ್ಷೆ ಸಮಯದಲ್ಲಿ ಹೆಚ್ಚು ಭಯಭೀತರಾಗುವ ಸಾಧ್ಯತೆ ಇರುತ್ತದೆ.. ಆದರೆ ಭಯ ಪಡದೆ ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸುವ ಹವ್ಯಾಸ ಇಟ್ಟುಕೊಳ್ಳಬೇಕು.

7) 24 ಗಂಟೆಗಳ ಮೊದಲು ಎಲ್ಲಾ ಓದು ಮುಗಿಸಿ: ಪರೀಕ್ಷೆಗೆ 24 ಗಂಟೆ ಇದೆ ಎನ್ನುವಾಗಲೇ ನೀವು ಎಲ್ಲರಿಗೂ ಓದು ಮುಗಿಸಿ ಕೇವಲ ಮನನ ಮಾಡಿಕೊಳ್ಳಿ. ಅಂತಿಮ ಹಂತದಲ್ಲಿ ಸಿದ್ಧತೆ ಮಾಡುವುದರಿಂದ ನಿಮಗೆ ಸಾಕಷ್ಟು ಗೊಂದಲ ಉಂಟಾಗಬಹುದು.

8) ಟೈಮ್ ಟೇಬಲ್ ಹಾಕಿಕೊಳ್ಳಿ: ನೀವು ಪರೀಕ್ಷೆಗೆ ಸಿದ್ದವಾಗುತ್ತಿದ್ದಾರೆ ಎಂದರೇ ಮೊದಲು ಟೈಮ್ ಟೇಬಲ್ ಹಾಕಿಕೊಳ್ಳುವುದು ಉತ್ತಮ. ಯಾವ ವಿಷಯಕ್ಕೆ ಎಷ್ಟು ಸಮಯ ನೀಡಬೇಕು ಯಾವ ವಿಷಯದ ಮೇಲೆ ಎಷ್ಟು ಅವಧಿ ಓದಬೇಕು, ಇತರ ಚಟುವಟಿಕೆಗಳಿಗೆ ಎಷ್ಟು ಸಮಯ ನೀಡಬೇಕು ಎಂಬ ಟೈಮ್ ಟೇಬಲ್ ಹಾಕಿಕೊಂಡು ಓದಲು ಪ್ರಾರಂಭಿಸಿ.

 

Leave a Reply

Your email address will not be published. Required fields are marked *

error: Content is protected !!