ಉದಯವಾಹಿನಿ, ಲಖನೌ: ಪತ್ನಿ ಮತ್ತು ಮಕ್ಕಳು 500 ರುಪಾಯಿ ನೋಟುಗಳ ಕಟ್ಟುಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು ಈ ಫೋಟೋ ವೈರಲ್ ಆದ ಬೆನ್ನಲ್ಲೇ ಉತ್ತರ ಪ್ರದೇಶದ ಉನ್ನಾವೊದ ಪೊಲೀಸ್ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. 500 ರೂಪಾಯಿ ನೋಟುಗಳ ಬಂಡಲ್‌ಗಳೊಂದಿಗೆ ಪತ್ನಿ ಮತ್ತು ಮಕ್ಕಳು ಸೆಲ್ಫಿ ತೆಗೆದುಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದೀಗ ಆ ಅಧಿಕಾರಿ ವಿರುದ್ಧ ತನಿಖೆ ಆರಂಭಿಸಲಾಗಿದೆ. ಪೊಲೀಸ್ ಅಧಿಕಾರಿಯ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಸಿಗೆಯ ಮೇಲೆ 14 ಲಕ್ಷ ರೂಪಾಯಿ ಮೌಲ್ಯದ ನಗದು ರಾಶಿಯೊಂದಿಗೆ ಕುಳಿತಿದ್ದಾರೆ.
ನೋಟುಗಳ ಬಂಡಲ್‌ಗಳೊಂದಿಗೆ ಅಧಿಕಾರಿಯ ಚಿತ್ರ ವೈರಲ್ ಆದ ತಕ್ಷಣ, ಹಿರಿಯ ಪೊಲೀಸ್ ಅಧಿಕಾರಿ ತಕ್ಷಣ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಠಾಣಾ ಉಸ್ತುವಾರಿ ರಮೇಶ್ ಚಂದ್ರ ಸಾಹ್ನಿ ಅವರನ್ನು ಪೊಲೀಸ್ ಲೈನ್‌ಗೆ ವರ್ಗಾಯಿಸಲಾಗಿದೆ. ಆದಾಗ್ಯೂ, ರಮೇಶ್ ಚಂದ್ರ ಸಾಹ್ನಿ ತನ್ನನ್ನು ಸಮರ್ಥಿಸಿಕೊಂಡಿದ್ದಾರೆ. 2021ರ ನವೆಂಬರ್ 14ರಂದು ಅವರು ಕುಟುಂಬದ ಆಸ್ತಿಯನ್ನು ಮಾರಾಟ ಮಾಡಿದಾಗ ಚಿತ್ರ ತೆಗೆಯಲಾಗಿದೆ ಎಂದು ಹೇಳಿದ್ದಾರೆ.
