ಉದಯವಾಹಿನಿ, ನವದೆಹಲಿ: ದೆಹಲಿಯ ಸ್ವಾಮಿ ಚೈತನ್ಯಾನಂದ ಸರಸ್ವತಿಯ ಒಂದೊಂದೇ ಕರ್ಮಕಾಂಡಗಳು ಬಯಲಾಗುತ್ತಿದ್ದು, ಮಾಜಿ ವಿದ್ಯಾರ್ಥಿ ಹಾಗೂ ಐಎಎಫ್‌ನ ಗ್ರೂಪ್ ಕ್ಯಾಪ್ಟನ್ ಕಳಿಸಿದ ಮೇಲ್‌ನಿಂದ ಕಾಮಪುರಾಣವೇ ಬಹಿರಂಗಗೊಂಡಿದೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದಡಿ `ದೆಹಲಿ ಬಾಬಾ’ ಎಂದೇ ಖ್ಯಾತಿ ಪಡೆದಿದ್ದ ಚೈತನ್ಯಾನಂದ ಸ್ವಾಮೀಜಿ ಮತ್ತಷ್ಟು ಅವಾಂತರು ಬೆಳಕಿಗೆ ಬರ್ತಿವೆ. ಈ ಸ್ವಘೋಷಿತ ದೇವಮಾನವನ ರಾಸಲೀಲೆ ಬಗ್ಗೆ ಮಾಜಿ ವಿದ್ಯಾರ್ಥಿ ಹಾಗೂ ಐಎಎಫ್‌ನ ಗ್ರೂಪ್ ಕ್ಯಾಪ್ಟನ್‌ವೊಬ್ಬರು ಕೂಡ ಕೆಲ ದಿನಗಳ ಹಿಂದಷ್ಟೇ ಇ-ಮೇಲ್ ಕಳಿಸಿದ್ದರು. ಇದರಿಂದಾಗಿಯೇ ಕಾಮಿಸ್ವಾಮಿಯ ಬಣ್ಣ ಬಯಲಿಗೆ ಬಂದಿದೆ ಅಂತಲೂ ತಿಳಿದು ಬಂದಿದೆ.
ಇನ್ನೂ ದೌರ್ಜನ್ಯ ಪ್ರಕರಣದಲ್ಲಿ ಸಂಸ್ಥೆಯ ಡೀನ್ ಮತ್ತು ಇಬ್ಬರು ಮಹಿಳಾ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಅಧಿಕಾರಿಗಳ ಪ್ರಕಾರ, ಚೈತನ್ಯಾನಂದ ತನ್ನ ನೆಲಮಹಡಿಯ ಕಚೇರಿಯನ್ನು ಲೈಂಗಿಕ ಕಿರುಕುಳದ ತಾಣವನ್ನಾಗಿ ಪರಿವರ್ತಿಸಿದ್ದ. ಸಂತ್ರಸ್ತರು ಮಾತನಾಡದಂತೆ ಅಥವಾ ಸಂಸ್ಥೆಯಿಂದ ಹೊರಹೋಗದಂತೆ ತಡೆಯಲು ಅವರ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಪಿಎಚ್‌ಡಿ, ಎಂಬಿಎ ಮಾಡಿರೋದಾಗಿಯೂ ಸ್ವಾಮೀಜಿ ಹೇಳಿಕೊಂಡಿದ್ದರು.
