ಉದಯವಾಹಿನಿ, ಬೆಂಗಳೂರು: ಮಹಿಳೆಯರಲ್ಲಿ ಕಂಡು ಬರುವ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸುಧಾರೆಡ್ಡಿ ಫೌಂಡೇಶನ್ ತನ್ನ ಪ್ರಯತ್ನಗಳನ್ನು ಮುಂದುವರಿಸಿದ್ದು, ಈ ನಿಟ್ಟಿನಲ್ಲಿ ಭಾನುವಾರ ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ʼಪಿಂಕ್ ಪವರ್ ರನ್ 2.0” ಭರ್ಜರಿ ಯಶಸ್ಸು ಕಂಡಿತು. ಹೃದಯ ಸ್ಪರ್ಶಿ ಮತ್ತು ಸದ್ಭಾವನೆಯೊಂದಿಗೆ, ಸುಧಾ ರೆಡ್ಡಿ ಫೌಂಡೇಶನ್ ಆಯೋಜಿಸಿದ ‘ಪಿಂಕ್ ಪವರ್ ರನ್ 2.0’ ಇಲ್ಲಿನ ನೆಕ್ಲೇಸ್ ರಸ್ತೆಯಲ್ಲಿ ಬೆಳಗಿನ ಜಾವ ಆರಂಭವಾಯಿತು. ಈ ಓಟದಲ್ಲಿ ಸುಮಾರು 20,000 ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮಿಸ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷೆ ಜೂಲಿಯಾ ಮಾರ್ಲೆ, ಟೆನಿಸ್ ಪಟು ಲಿಯಾಂಡರ್ ಪೇಸ್, ದೇಶದ ಪ್ರಮುಖ ಮೂಲಭೂತ ಸೌಕರ್ಯ ಸಂಸ್ಥೆ ಎಂ.ಇ.ಐ.ಎಲ್‌ನ ಕಾರ್ಯಕಾರಿ ನಿರ್ದೇಶಕ ಕೃಷ್ಣಾರೆಡ್ಡಿ, ಮಿಸ್ ವರ್ಲ್ಡ್ ಸುಚಾತಾ ಚಂಗುಸ್ರಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಮಿಸ್ ವರ್ಲ್ಡ್ ಕೆರೀಬಿಯನ್, ಮಿಸ್ ನಮೀಬಿಯಾ, ಮಿಸ್ ವರ್ಲ್ಡ್ ಓಶಿಯಾನಿಯಾ, ಮಿಸ್ ವರ್ಲ್ಡ್ ಅಮೆರಿಕಾಸ್, ಮಿಸ್ ವರ್ಲ್ಡ್ ಯೂರೋಪ್, ಮಿಸ್ ವರ್ಲ್ಡ್ ಏಷ್ಯಾ, ದೇಶೀಯವಾಗಿ ಮಿಸ್ ಇಂಡಿಯಾ ವರ್ಲ್ಡ್ ನಂದಿನಿ ಗುಪ್ತಾ ಮತ್ತು ನಿಖಿತಾ ಪೋರ್ವಾಲ್ ಜಾಗೃತಿ ರನ್‌ನಲ್ಲಿ ಭಾಗವಹಿಸಿದ್ದರು.
“ನಮ್ಮೆಲ್ಲರ ಒಗ್ಗೂಡಿದ ಪ್ರಯತ್ನಗಳು ಸ್ತನ ಕ್ಯಾನ್ಸರ್ ಜಾಗೃತಿಗೆ ಶಕ್ತಿಶಾಲಿ ವ್ಯವಸ್ಥೆ ಹುಟ್ಟುಹಾಕಬಹುದು ಮತ್ತು ಪ್ರತಿ ವ್ಯಕ್ತಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಅಭಿಯಾನಗಳು ಅಗತ್ಯ. ಸ್ತನ ಕ್ಯಾನ್ಸರ್ ಭಾರತೀಯ ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾಗಿದೆ, ಮುಂಚಿತ ಪತ್ತೆ ಅನೇಕ ಪ್ರಾಣಗಳನ್ನು ಉಳಿಸಬಹುದು.
