ಉದಯವಾಹಿನಿ, ಜೈಪುರ: ರಾಜಸ್ಥಾನದ ಕೋಟಾದಲ್ಲಿ ಭಾನುವಾರ ( 2 ಗಂಟೆಗೆ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಾಲಿವುಡ್‌, ಕಿರುತೆರೆಯ ಬಾಲನಟ 10 ವರ್ಷದ ಬಾಲಕ ಮತ್ತು ಆತನ 15 ವರ್ಷದ ಸಹೋದರ ಮೃತಪಟ್ಟಿದ್ದಾರೆ ಮೃತರನ್ನು ನಟಿ ರೀಟಾ ಶರ್ಮಾ ಅವರ ಮಕ್ಕಳಾದ ವೀರ್‌ ಶರ್ಮಾ ಮತ್ತು ಶೌರ್ಯ ಶರ್ಮಾ ಎಂದು ಗುರುತಿಸಲಾಗಿದೆ. ಕೋಟಾದ ಅನಂತಪುರದಲ್ಲಿರುವ ದೀಪ್‌ಶ್ರೀ ಅಪಾರ್ಟ್‌ಮೆಂಟ್‌ನ ಇವರ ನಿವಾಸದಲ್ಲಿ ದುರಂತ ಸಂಭವಿಸಿದೆ. ಘಟನೆ ವೇಳೆ ಮಕ್ಕಳ ಪೋಷಕರಾದ ರೀಟಾ ಶರ್ಮಾ ಮತ್ತು ಜಿತೇಂದ್ರ ಶರ್ಮಾ ಮನೆಯಲ್ಲಿರಲಿಲ್ಲ.
ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ರಾತ್ರಿ ಮನೆಯೊಳಗಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಧಾವಿಸಿ ಬಂದಾಗ ಮಕ್ಕಳಿಬ್ಬರು ಅಸುನೀಗಿದ್ದರು. ಈ ವೇಳೆ ಕಾರ್ಯ ನಿಮಿತ್ತ ರೀಟಾ ಮುಂಬೈಗೆ ತೆರಳಿದ್ದರೆ ಜಿತೇಂದ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಗಡೆ ಹೋಗಿದ್ದರು. ಮನೆಯಲ್ಲಿ ಮಕ್ಕಳಿಬ್ಬರೇ ಇದ್ದರು ಎನ್ನಲಾಗಿದೆ. ಹೊಗೆಯಿಂದ ಉಸಿರುಗಟ್ಟಿ ಮಕ್ಕಳು ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!