
ಉದಯವಾಹಿನಿ, ಫರಿದಾಬಾದ್: ಬಾಕ್ಸರ್ ಮೇರಿ ಕೋಮ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ಮೇಘಾಲಯಕ್ಕೆ ಹೋಗಿದ್ದಾಗ ಅವರ ಫರಿದಾಬಾದ್ ಸೆಕ್ಟರ್ 46ರಲ್ಲಿರುವ ಮನೆಯಿಂದ ಟಿವಿ, ಬೆಲೆಬಾಳುವ ವಸ್ತುಗಳು ಕಳ್ಳರು ದರೋಡೆ ಮಾಡಿದ್ದಾರೆ. ಇದರ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಲ್ಲಿ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ಮನೆಯಿಂದ ದೂರದರ್ಶನ ಸೆಟ್ ಸೇರಿದಂತೆ ವಿವಿಧ ವಸ್ತುಗಳನ್ನು ಸಾಗಿಸುತ್ತಿರುವುದನ್ನು ತೋರಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ಫರಿದಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಫರಿದಾಬಾದ್‌ನ ಸೆಕ್ಟರ್ 46ರಲ್ಲಿರುವ ಇಬೆನೆಸರ್ ಇನ್ ಎಂಬ ಎರಡು ಅಂತಸ್ತಿನ ಬಾಕ್ಸರ್ ಮೇರಿ ಕೋಮ್ ಬಂಗಲೆಯು ಕಳೆದ ಕೆಲವು ದಿನಗಳಿಂದ ಲಾಕ್ ಮಾಡಲಾಗಿತ್ತು. ಈ ನಡುವೆ ಮನೆಗೆ ನುಗ್ಗಿದ ಅಪರಿಚಿತರು ಬಂಗಲೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದರ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲವು ಅನುಮಾನಾಸ್ಪದ ವ್ಯಕ್ತಿಗಳು ಮನೆಯಿಂದ ಟಿವಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ಸಾಗಿಸುತ್ತಿರುವುದನ್ನು ಕಾಣಬಹುದು. ಇದರ ದೃಶ್ಯಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಮೇರಿ ಕೋಮ್ ಮೇಘಾಲಯದ ಸೊಹ್ರಾದಲ್ಲಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದಾರೆ. ಘಟನೆಯ ಕುರಿತು ಅವರಿಗೆ ನೆರೆಹೊರೆಯವರು ಮಾಹಿತಿ ನೀಡಿದ್ದು, ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ.
