ಉದಯವಾಹಿನಿ,ಮಲೇಷ್ಯಾ: ವಿದ್ಯಾರ್ಥಿ ಜೋಡಿಯೊಂದು ಶಾಪಿಂಗ್ ಮಾಲ್ ನ ಸ್ನಾನಗೃಹದೊಳಗೆ ಸುಮಾರು 40 ನಿಮಿಷಗಳ ತಮ್ಮನ್ನು ತಾವು ಲಾಕ್ ಮಾಡಿಕೊಂಡ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಅನುಮಾನಗೊಂಡ ವ್ಯಕ್ತಿಯೊಬ್ಬರು ಈ ಕುರಿತು ಭದ್ರತಾ ಸಿಬ್ಬಂದಿಗೆ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸುತ್ತಿದ್ದ ಯುವ ಜೋಡಿ ಮಾಲ್‌ನ ಸ್ನಾನಗೃಹಕ್ಕೆ ಹೋಗಿದ್ದು, 40 ನಿಮಿಷಗಳಾದರೂ ಹೊರಗೆ ಬರಲಿಲ್ಲ. ಬಳಿಕ ಇದು ಎಲ್ಲರನ್ನೂ ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ಈ ಘಟನೆ ಮಲೇಷ್ಯಾದ ಶಾಪಿಂಗ್ ಕೇಂದ್ರದಲ್ಲಿ ನಡೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮಲೇಷ್ಯಾದ ಶಾಪಿಂಗ್ ಕೇಂದ್ರದಲ್ಲಿ ಯುವ ಜೋಡಿಯೊಂದು ಸಾರ್ವಜನಿಕ ಶೌಚಾಲಯದ ಕ್ಯೂಬಿಕಲ್‌ನೊಳಗೆ 40 ನಿಮಿಷಗಳ ಕಾಲ ಕಳೆದಿದ್ದು, ಇದು ವಿವಾದದ ಕೇಂದ್ರಬಿಂದುವಾಗಿದೆ. ಪ್ರಸಿದ್ಧ ಮಾಲ್‌ನ ಕೆಫೆ ವಿಭಾಗದಲ್ಲಿ ನಡೆದ ಈ ಘಟನೆಯು ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.
ವಿದ್ಯಾರ್ಥಿ ಯುವ ಜೋಡಿ ವಿಹಾರಕ್ಕಾಗಿ ಮಾಲ್‌ಗೆ ಬಂದಿದ್ದು, ಬಳಿಕ ಹೊರಬಂದು ನೇರವಾಗಿ ಸಾರ್ವಜನಿಕ ಶೌಚಾಲಯಕ್ಕೆ ಹೋದರು. ಅಲ್ಲಿ ತಮ್ಮನ್ನು ತಾವು ಸ್ನಾನಗೃಹದೊಳಗೆ ಲಾಕ್ ಮಾಡಿಕೊಂಡರು. ಸಮಯ ಕಳೆದಂತೆ ಇದನ್ನು ಬಳಸಲು ಕಾಯುತ್ತಿದ್ದ ಇತರ ಸಂದರ್ಶಕರು ಶಂಕೆ ವ್ಯಕ್ತವಾಗತೊಡಗಿತು. 40 ನಿಮಿಷಗಳಾದರೂ ಯಾರೂ ಹೊರಗೆ ಬಾರದೇ ಇದ್ದುದರಿಂದ ಒಬ್ಬ ಸಂದರ್ಶಕ ಬಾಗಿಲಿನ ಕೆಳಗೆ ಇಣುಕಿದಾಗ ನಾಲ್ಕು ಕಾಲುಗಳನ್ನು ಗಮನಿಸಿದನು. ಕೂಡಲೇ ಆತಂಕಗೊಂಡ ಪ್ರೇಕ್ಷಕರು ಈ ಬಗ್ಗೆ ಮಾಲ್ ನ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂಡ ಭದ್ರತಾ ಅಧಿಕಾರಿಗಳು ಬಾಗಿಲು ತಟ್ಟಿದರೂ ಜೋಡಿ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಬಲವಂತವಾಗಿ ಬಾಗಿಲು ತೆರೆಯಲಾಯಿತು.

 

Leave a Reply

Your email address will not be published. Required fields are marked *

error: Content is protected !!