ಉದಯವಾಹಿನಿ, ನ್ಯೂಯಾರ್ಕ್ ಅಂಕಾಲಜಿ ಹೆಮಟೊಲಜಿ ಕಮ್ಯುನಿಟಿ ಕ್ಯಾನ್ಸರ್ ಫೌಂಡೇಶನ್ ಆಯೋಜಿಸಿದ್ದ “ರಾಕ್ ಯುವರ್ ಸ್ಟೈಲ್” ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಮಹಾಮಾರಿಯ ವಿರುದ್ಧ 9 ವರ್ಷಗಳಿಂದ ಸತತವಾಗಿ ಹೋರಾಡಿ ಗೆದ್ದಿರುವ 78 ವರ್ಷದ ಆಲ್ಬನಿ ಕನ್ನಡ ಕಲಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಲತಾ ಕಲಿಯತ್ ಅವರು ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದರು.ಫ್ಯಾಷನ್ ಶೋ ದಲ್ಲಿ ಭಾರತೀಯ ಸಂಸ್ಕೃತಿಯನ್ನು ಸೂಚಿಸುವ ಸುಂದರವಾದ ಸೀರೆಯನ್ನು ಧರಿಸಿ ಇವರು ದಸರಾ ಹಬ್ಬದ ಪ್ರಯುಕ್ತ “ಐಗಿರಿ ನಂದಿನಿ” ಹಾಡಿಗೆ ಹೆಜ್ಜೆ ಹಾಕಿದ್ದು ಎಲ್ಲರನ್ನು ರೋಮಾಂಚನಗೊಳಿಸಿತು.
ಫ್ಯಾಷನ್ ಶೋ ನಲ್ಲಿ ಸುಮಾರು 20 ಜನ ಮಾಡೆಲ್‌ಗಳು ಭಾಗವಹಿಸಿದ್ದರು. ಇವರೆಲ್ಲರೂ ಕ್ಯಾನ್ಸರ್ ರೋಗದಿಂದ ಬದುಕುಳಿದವರು ಅಥವಾ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರ ಅಥವಾ ಕ್ಯಾನ್ಸರ್ ರೋಗದಿಂದ ಮೃತಪಟ್ಟವರ ಸಂಬಂಧಿಕರು. ಇದರಲ್ಲಿ ಕ್ಯಾನ್ಸರ್ ರೋಗದಿಂದ ಸಾವನ್ನಪ್ಪಿದ ತಮ್ಮ ತಾಯಿ ಲಿಸಾ ಓನೀಲ್ ಗೌರವಾರ್ಥವಾಗಿ ಚಿಕ್ಕ ಮಕ್ಕಳಾದ ಏಳು ವರ್ಷದ ಪೇಟಾನ್ ಮತ್ತು ಇಲ್ಲೀ ಓನೀಲ್ ಭಾಗವಹಿಸಿದ್ದು ವಿಶೇಷವಾಗಿತ್ತ
ಕಾರ್ಯಕ್ರಮದ ಮುಖಾಂತರ ಕ್ಯಾನ್ಸರ್ ಔಷಧಿಯ ಸಂಶೋಧನೆಗಾಗಿ ಒಟ್ಟು $197,000 ಹಣವನ್ನು ಸಂಗ್ರಹಿಸಲಾಯಿತು. ನಮ್ಮ ಕನ್ನಡಿಗ ಕ್ಯಾನ್ಸರ್ ಸ್ಪೆಷಲಿಸ್ಟ್ ಡಾ. ರಾಹುಲ್ ರವಿಲ್ಲಾ ತಮ್ಮ ತಂದೆಯ ನೆನಪಿಗಾಗಿ ಫ್ಯಾಷನ್ ಶೋ ದಲ್ಲಿ ವಾಕ್ ಮಾಡಿದರು. ಅತ್ಯಂತ ಹೆಚ್ಚು ಫಂಡ್ ರೈಸ್ ಮಾಡಿದವರಲ್ಲಿ ಸುಮಾರು $14,000 ಫಂಡ್ ರೈಸ್ ಮಾಡಿದ ಡಾ. ರಾಹುಲ್ ಎರಡನೇ ಬಹುಮಾನ ಪಡೆದರು. ಲತಾ ಅವರು, ʼನನ್ನ ಫಂಡ್ ರೈಸಿಂಗ್ ಟಾರ್ಗೆಟ್ $2500 ಇತ್ತು. ಆದರೆ ನಮ್ಮ ಆಲ್ಬನಿ ಕನ್ನಡ ಸಂಘದ ಸದಸ್ಯರ ಸಹಾಯದಿಂದ ಪ್ರೋತ್ಸಾಹದಿಂದ ಸುಮಾರು $5000 ಸಂಗ್ರಹಿಸಿದ್ದೇನೆ. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಸಹಾಯದಿಂದ, ಔಷಧಿಯನ್ನು ಕಂಡು ಹಿಡಿದು ಈ ಕ್ಯಾನ್ಸರ್ ಮಹಾಮಾರಿಯನ್ನು ಭೂಮಿಯಿಂದ ಹೊಡೆದು ಓಡಿಸುವಂತೆ ಆಗಲಿ ಎಂದು ಆಸೆ ವ್ಯಕ್ತಪಡಿಸಿದರು.
