ಉದಯವಾಹಿನಿ, ಬೆಂಗಳೂರು: ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ರಸ್ತೆಗೆ ಇಳಿಸಿದ್ರೆ ಸೆಕ್ಷನ್‌ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ನಂಬರ್‌ ಪ್ಲೇಟ್‌ ಇಲ್ಲದ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಯಾಕೆ ಇಷ್ಟು ಕಠಿಣ ಕ್ರಮ ಎಂದರೆ, ಕೆಲವರು ಸಂಚಾರಿ ನಿಯಮ ಉಲ್ಲಂಘನೆ ಮರೆಮಾಚಲು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಕೆಲ ಪುಂಡರು ವಾಹನಗಳಿಗೆ ನಂಬರ್ ಪ್ಲೇಟ್ ಹಾಕದೆ, ನಂಬರ್ ಪ್ಲೇಟ್ ವಿಕಾರಗೊಳಿಸಿ ಓಡಾಡುತ್ತಿದ್ದಾರೆ. ಅಂತವರನ್ನು ಮಟ್ಟ ಹಾಕಲು ಪೊಲೀಸರು ಕಠಿಣ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ.
ಪಶ್ಚಿಮ ವಿಭಾಗ ಒಂದರಲ್ಲೇ 40ಕ್ಕೂ ಹೆಚ್ಚು ವಾಹನ ಸವಾರರ ವಿರುದ್ಧ ವಂಚನೆ ಕೇಸ್ ದಾಖಲಿಸಿಸಲಾಗಿದೆ. ನಗರದ ವಿವಿಧ ವಿಭಾಗದಲ್ಲಿ ಒಟ್ಟು ನೂರಕ್ಕು ಅಧಿಕ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಬಿಸಿಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ರಾತ್ರಿಯಲ್ಲಿ ನಗರದಾದ್ಯಂತ ಸುಮಾರು 1000 ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ದರು. ಕೆಲವರು ಸಮರ್ಪಕದ ಕಾರಣ ನೀಡಿ ವಾಹನ ಬಿಡಿಸಿಕೊಂಡು ಹೋದರೆ, ಉಳಿದವರು ಸಮರ್ಪಕವಾದ ಕಾರಣ ನೀಡದೆ ಹೋಗಿದ್ದರಿಂದ ವಂಚನೆ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!