ಉದಯವಾಹಿನಿ, ಶಾರ್ಜಾ: ಯುಎಇಯ ಶಾರ್ಜಾದಲ್ಲಿ (Sharjah) 56ನೇ ವಾಚ್ ಆ್ಯಂಡ್‌ ಜ್ಯುವೆಲರಿ ಮಿಡಲ್ ಈಸ್ಟ್ ಶೋ ಸೆಪ್ಟೆಂಬರ್ 24ರಿಂದ 28ರವರೆಗೆ ನಡೆಯಿತು. 20 ದೇಶಗಳಿಂದ 500ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿ, ಐಷಾರಾಮಿ ಗಡಿಯಾರಗಳು (Watches), ಚಿನ್ನ ಮತ್ತು ರತ್ನಗಳನ್ನು ಪ್ರದರ್ಶಿಸಿದರು. ಶಾರ್ಜಾ ಚೇಂಬರ್ ಆಫ್ ಕಾಮರ್ಸ್ ಸಹಯೋಗದೊಂದಿಗೆ ನಡೆದ ಈ ಶೋ, ಈ ಪ್ರದೇಶದ ಅತಿದೊಡ್ಡ ಜ್ಯುವೆಲರಿ ವ್ಯಾಪಾರ ಮೇಳವಾಗಿದೆ.
ಶೋ ಮುಖ್ಯ ಆಕರ್ಷಣೆ ಅಲ್ ರೊಮೈಜಾನ್‌ನ ‘ದುಬೈ ಡ್ರೆಸ್’. 21 ಕ್ಯಾರಟ್ ಚಿನ್ನದಿಂದ ಮಾಡಿದ ಈ ಉಡುಗೆ, 10.08 ಕೆಜಿ ತೂಕವಿದ್ದು, ₹ 10.87 ಕೋಟಿ ಮೌಲ್ಯವಿದೆ. ಇದರಲ್ಲಿ 398 ಗ್ರಾಂ ಮುಕುಟ, 8,810.6 ಗ್ರಾಂ ಮಾಲೆ, 134.1 ಗ್ರಾಂ ಕಿವಿಯ ಆಭರಣ ಸೇರಿವೆ. ಇದಕ್ಕಾಗಿ ಕಲಾವಿದರು ತಿಂಗಳುಗಟ್ಟಲೆ ಕೆಲಸ ಮಾಡಿದ್ದು, ಅಲ್ ರೊಮೈಜಾನ್‌ ಅವರ ಐಷಾರಾಮಿ ಕಲೆಯನ್ನು ತೋರಿಸುತ್ತದೆ. ಈ ಹಿಂದಿನ ಶೋನಲ್ಲಿ ಇವರು ₹ 1.5 ಮಿಲಿಯನ್‌ನ ಚಿನ್ನದ ಸೈಕಲ್‌ ಅನ್ನು ಪ್ರದರ್ಶಿಸಿದ್ದರು.
30,000 ಚದರ ಮೀಟರ್‌ನ ಈ ಐದು ದಿನದ ಶೋ, 1,800ಕ್ಕೂ ಹೆಚ್ಚು ಜ್ಯುವೆಲರ್‌ಗಳು ಮತ್ತು ಡಿಸೈನರ್‌ಗಳನ್ನು ಒಗ್ಗೂಡಿಸಿತು. ಶೇ. 68 ಪ್ರದರ್ಶಕರು ಇಟಲಿ, ಭಾರತ, ಟರ್ಕಿ, ಅಮೆರಿಕ, ರಷ್ಯಾ, ಯುಕೆ, ಜಪಾನ್, ಚೀನಾದಿಂದ ಬಂದಿದ್ದರು. ಆಸ್ಟ್ರೇಲಿಯಾ, ಮಯನ್ಮಾರ್, ಪಾಕಿಸ್ತಾನದಿಂದ ಕೂಡ ಹಲವರು ಸೇರಿದ್ದರು. ಸೌದಿ, ಈಜಿಪ್ಟ್, ಬಹ್‌ರೈನ್‌ನಿಂದ ಅರಬ್ ದೇಶಗಳ ವ್ಯಾಪಾರಿಗಳೂ ಇದ್ದರು. ‘ಎಮಿರೇಟಿ ಗೋಲ್ಡ್‌ಸ್ಮಿತ್ ಪ್ಲಾಟ್‌ಫಾರ್ಮ್’ ಮೂಲಕ ಸ್ಥಳೀಯ ಕಲಾವಿದರು ಸಾಂಪ್ರದಾಯಿಕ ಮತ್ತು ಆಧುನಿಕ ಜ್ಯುವೆಲರಿಯನ್ನು ಪ್ರದರ್ಶಿಸಿದರು.

Leave a Reply

Your email address will not be published. Required fields are marked *

error: Content is protected !!