ಉದಯವಾಹಿನಿ, ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು ಏಕದಿನ ವಿಶ್ವಕಪ್‌ನಲ್ಲಿ ಕಳಪೆ ಆರಂಭವನ್ನು ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವು ಮಂಧಾನ ಅವರನ್ನು 40 ವರ್ಷದ ಬೌಲರ್ ಕೇವಲ 8 ರನ್​ಗಳಿಗೆ ಔಟ್ ಮಾಡಿದರು. ಪಂದ್ಯದ ನಾಲ್ಕನೇ ಓವರ್‌ನಲ್ಲಿ ಶ್ರೀಲಂಕಾ ಭಾರತಕ್ಕೆ ದೊಡ್ಡ ಹೊಡೆತ ನೀಡಿತು. ಎಡಗೈ ಬ್ಯಾಟ್ಸ್‌ಮನ್ ಮಂಧಾನ ಬೌಲರ್ ಉದೇಶಿಕಾ ಪ್ರಬೋಧಿನಿ ಎಸೆತದಲ್ಲಿ ವಿಷ್ಮಿ ಗುಣರತ್ನಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಮಂಧಾನ 10 ಎಸೆತಗಳಲ್ಲಿ 2 ಬೌಂಡರಿಗಳನ್ನು ಬಾರಿಸಿ 8 ರನ್ ಗಳಿಸಿದರು. ವಿಶ್ವಕಪ್‌ಗೆ ಮೊದಲು, ಆಸ್ಟ್ರೇಲಿಯಾ ವಿರುದ್ಧದ ತವರು ಏಕದಿನ ಸರಣಿಯಲ್ಲಿ ಮಂಧಾನ ಅದ್ಭುತ ಪ್ರದರ್ಶನ ನೀಡಿದ್ದರು. ಈ ವರ್ಷ ಮಂಧಾನ ಅವರ ಮೊದಲ ಒಂದಂಕಿ ಸ್ಕೋರ್ ಇದಾಗಿದೆ.
ಭಾರತ ತಂಡವು ಶ್ರೀಲಂಕಾ ವಿರುದ್ಧ ಐಸಿಸಿ ಕ್ರಿಕೆಟ್ ವಿಶ್ವಕಪ್ 2025 ರಲ್ಲಿ ತನ್ನ ಅಭಿಯಾನವನ್ನು ಆರಂಭಿಸಿದೆ. ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂಧಾನ ಭಾರತಕ್ಕೆ ಇನ್ನಿಂಗ್ಸ್ ಆರಂಭಿಸಿದರು. ಭಾರತ ತಮಡ ಮಂಧಾನ ಅವರ ವಿಕೆಟ್ ಅನ್ನು ಕೇವಲ 14 ರನ್‌ಗಳಿಗೆ ಕಳೆದುಕೊಂಡಿತು. ಮೊದಲ ಪಂದ್ಯದ ಆರಂಭದಲ್ಲಿಯೇ ಮಂಧಾನ ಔಟಾದರೂ, ಗುಂಪು ಹಂತದಲ್ಲಿ ಅವರು ಇನ್ನೂ ಆರು ಪಂದ್ಯಗಳನ್ನು ಆಡಬೇಕಾಗಿದೆ, ಅಲ್ಲಿ ಅವರು ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಹೇಗೆ ನೆರವಾಗುತ್ತಾರೆ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!