ಉದಯವಾಹಿನಿ, ಟಿ20 ವಿಶ್ವಕಪ್ ಆರಂಭವಾಗುತ್ತಿದ್ದು, ಪಾಕಿಸ್ತಾನ ತಂಡ ಭಾಗವಹಿಸುತ್ತೋ, ಇಲ್ಲವೋ ಎಂಬ ಪ್ರಶ್ನೆ ಕ್ರಿಕೆಟ್ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯದ ಭರ್ಜರಿ ಚರ್ಚೆ ನಡೆಯುತ್ತಿದ್ದು. ಇದರ ನಡುವೆ, ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಹೇಳಿಕೆಯಲ್ಲಿ ಪಾಕ್ ತಂಡದ ಹೊರಗುಳಿಯುವ ಬೆದರಿಕೆಗಳು ಕೇವಲ ನಾಟಕ ಮತ್ತು ಪ್ರಚಾರಾತ್ಮಕ ಉದ್ದೇಶದಾಗಿದ್ದು, ಅದು ನಿಜವಲ್ಲ ಎಂದು ಭಿಪ್ರಾಯಪಟ್ಟಿದ್ದಾರೆ.
ಪಾಕ್ ಈಗ ಸ್ವಲ್ಪ ಸಹಾನುಭೂತಿ ಪಡೆಯಲು ಬಾಂಗ್ಲಾದೇಶವನ್ನು ಬೆಂಬಲಿಸುವ ನಾಟಕ ಮಾಡುತ್ತಿದ್ದಾರೆ. ಬೇರೇನೂ ಅಲ್ಲ. ಇಲ್ಲಿಯವರೆಗೆ, ಅವರು ಹಾಗೆಯೇ ಮಾಡುತ್ತಾ ಬಂದಿದೆ. ಹೀಗಾಗಿ ವಿಶ್ವಕಪ್ ಅನ್ನು ಬಹಿಷ್ಕರಿಸುತ್ತೇವೆ ಎನ್ನುವುದು ಪಾಕಿಸ್ತಾನದ ಗೊಡ್ಡು ಬೆದರಿಕೆ ಅಷ್ಟೇ. ಅದಕ್ಕೆ ಅಂತಹ ಮಹತ್ವ ನೀಡಬೇಕಿಲ್ಲ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಬಾಂಗ್ಲಾದೇಶ ತಂಡಕ್ಕೆ ಬೆಂಬಲ ಸೂಚಿಸುವ ಮೂಲಕ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯನ್ನು ಉಲ್ಲೇಖಿಸಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಪಾಕ್ ತಂಡದ ಭಾಗವಹಿಸುವುದೇ ಅಥವಾ ಹೊರಗುಳಿಯುವುದೇ ಅಂತಿಮ ನಿರ್ಧಾರ ಪಾಕಿಸ್ತಾನ ಸರ್ಕಾರದ ಕೈಯಲ್ಲಿದೆ.
ಐಸಿಸಿ ಕೂಡ ತಕ್ಷಣ ಎಚ್ಚರಿಕೆ ನೀಡಿದ್ದು, ತಂಡವು ಟೂರ್ನಿಯಿಂದ ಹೊರಗುಳಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದರಲ್ಲಿ ದ್ವಿಪಕ್ಷೀಯ ಸರಣಿ, ಏಷ್ಯಾಕಪ್ ಮತ್ತು ಪಾಕ್ ಸೂಪರ್ ಲೀಗ್ ಗೆ ವಿದೇಶಿ ಆಟಗಾರರ ಪ್ರವೇಶ ನಿರ್ಬಂಧವೂ ಸೇರಿದೆ.
