ಉದಯವಾಹಿನಿ, ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ದಿನ ಭಾರತ ಮೆಲುಗೈ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ವಿಂಡೀಸ್ 44.1 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಯ್ತು. ನಂತರ ಬ್ಯಾಟ್ ಬೀಸಿದ ಭಾರತ 38 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 121 ರನ್ ಹೊಡೆದಿದೆ.
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 36 ರನ್ ಹೊಡೆದರೆ ಸಾಯಿ ಸುದರ್ಶನ್ 7 ರನ್ ಗಳಿಸಿ ಔಟಾಗಿದ್ದಾರೆ. ಕೆಎಲ್ ರಾಹುಲ್ ಔಟಾಗದೇ 53 ರನ್(114 ಎಸೆತ, 6 ಬೌಂಡರಿ), ಶುಭಮನ್ ಗಿಲ್ ಔಟಾಗದೇ 18 ರನ್ ಗಳಿಸಿ ನಾಳೆ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ವೆಸ್ಟ್ ಇಂಡೀಸ್ ಪರ ಜೇಡನ್ ಸೀಲ್ಸ್ ಹಾಗೂ ರೋಸ್ಟನ್ ಚೇಸ್ ತಲಾ ಒಂದೊಂದು ವಿಕೆಟ್ ಕಿತ್ತಿದ್ದಾರೆ.
ಬ್ಯಾಟಿಂಗ್ ಆರಂಭಿಸಿದ ವೆಸ್ಟ್‌ಇಂಡೀಸ್ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳಲು ಆರಭಿಸಿತು. 42 ರನ್‌ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ರೋಸ್ಟನ್ ಚೇಸ್ 24 ಹಾಗೂ ಜಸ್ಟಿನ್ ಗ್ರೀವ್ಸ್ 32 ರನ್ ಗಳಿಸಿ ಸ್ವಲ್ಪ ಹೋರಾಟ ಪ್ರದರ್ಶಿಸಿದರು. ಭಾರತ ಇತರ ರೂಪದಲ್ಲಿ 21 ರನ್( ಬೈ 9, ಲೆಗ್ ಬೈ 6 ನೋಬಾಲ್ 1, ವೈಡ್ 5) ನೀಡಿತ್ತು. ಸಿರಾಜ್ 4 ವಿಕೆಟ್ ಪಡೆದರೆ ಬುಮ್ರಾ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ 2 , ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
