ಉದಯವಾಹಿನಿ, ರಾಯ್ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ 103 ಮಾವೋವಾದಿಗಳು ಹಿರಿಯ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಈ ಹಿಂದೆ 46 ಮಂದಿ ನಕ್ಸಲರ ಪತ್ತೆಗೆ 1 ಕೋಟಿ ರೂ. ಹಣಕ್ಕೂ ಹೆಚ್ಚು ಬಹುಮಾನ ಘೋಷಿಸಲಾಗಿತ್ತು. ಇದೀಗ ಪೊಲೀಸ್ ಎನ್‌ಕೌಂಟರ್ ಭೀತಿಯ ಹಿನ್ನೆಲೆ ಆರ್‌ಪಿಸಿ ಮಾವೋವಾದಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದ 22 ಮಹಿಳೆಯರು ಸೇರಿ 102 ಮಂದಿ ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುನರ್ವಸತಿಯಾಗಿ ಉತ್ತೇಜಿಸುವ ರಾಜ್ಯ ನೇತೃತ್ವದ ಉಪಕ್ರಮವಾದ ಪುನಾ ಮಾರ್ಗೆಮ್‌ನ ಬ್ಯಾನರ್ ಅಡಿಯಲ್ಲಿ ಈ ಶರಣಾಗತಿ ಕಾರ್ಯಕ್ರಮ ನಡೆಯಿತು. ಶರಣಾದ ಮಾವೋವಾದಿಗಳಿಗೆ ತಲಾ 50,000 ರೂ.ಗಳ ಚೆಕ್ ಅನ್ನು ನೀಡಲಾಯಿತು. ಅಲ್ಲದೇ ಸರ್ಕಾರ ವತಿಯಿಂದ ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದಿದ್ದಾರೆ.
ಮಾವೋವಾದಿಗಳ ವಿಭಾಗೀಯ ಸಮಿತಿ ಸದಸ್ಯ ಲಚ್ಚು ಪುನೆಮ್ ಅಲಿಯಾಸ್ ಸಂತೋಷ್ (36), ಪ್ಲಟೂನ್ ಪಕ್ಷದ ಸಮಿತಿ ಸದಸ್ಯರಾದ ಗುಡ್ಡು ಫರ್ಸಾ, ಭೀಮಾ ಸೋಧಿ, ಹಿಡ್ಮೆ ಫರ್ಸಾ ಮತ್ತು ಸುಖಮತಿ ಓಯಮ್‌ಗೆ ತಲಾ 8 ಲಕ್ಷ ರೂ. ಹಣವನ್ನು ಬಹುಮಾನವಾಗಿ ನೀಡಲಾಗಿದೆ. ಇನ್ನು ನಾಲ್ವರಿಗೆ ತಲಾ 5 ಲಕ್ಷ ರೂ. ಹಣ, 15 ಮಂದಿಗೆ ತಲಾ 2 ಲಕ್ಷ ರೂ. ಹಣ, ಹತ್ತು ಮಂದಿಗೆ ತಲಾ 1 ಲಕ್ಷ ರೂ., 12 ಮಂದಿಗೆ ತಲಾ 50,000 ರೂ., ಮೂವರಿಗೆ ತಲಾ 10,000 ರೂ. ಹಣವನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!