ಉದಯವಾಹಿನಿ, ಇಸ್ಲಾಮಾಬಾದ್: ವಿವಿಧ ಬೇಡಿಕೆಗಳನ್ನು ಪೂರೈಸದ ಕಾರಣ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಪ್ರತಿಭಟನೆಯ ಕಾವು ಈಗ ಕರಾಚಿ ಮತ್ತು ಇಸ್ಲಾಮಾಬಾದ್‌ಗೂ ಹರಡಿವೆ. ಸುಮಾರು 12 ಮಂದಿಯನ್ನು ಪೊಲೀಸರು ಗುಂಡಿಕ್ಕಿ ಕೊಂದ ಬಳಿಕ ಆಡಳಿತದ ವಿರುದ್ಧ ಆಕ್ರೋಶ ಹೆಚ್ಚಾಗಿವೆ. ಅತೀ ದೊಡ್ಡ ಪ್ರತಿಭಟನೆಯ ನೇತೃತ್ವ ವಹಿಸಿರುವ ಅವಾಮಿ ಕ್ರಿಯಾ ಸಮಿತಿ ನಾಯಕ ಶೌಕತ್ ನವಾಜ್ ಮಿರ್ ಪೊಲೀಸರ ಕಾರ್ಯಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತನ್ನದೇ ಜನರನ್ನು ಕೊಲ್ಲುವ ಮಾಟಗಾತಿಯರು ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್ ಬೇಡಿಕೆಗಳನ್ನು ಪೂರೈಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅವಾಮಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕೆಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಇದನ್ನು ಪಾಕಿಸ್ತಾನದಲ್ಲಿ 38 ವರ್ಷಗಳಲ್ಲಿ ನಡೆದಿರುವ ಅತಿದೊಡ್ಡ ಪ್ರತಿಭಟನೆ ಎಂದು ಕರೆಯಲಾಗಿದೆ. ಈ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಸುಮಾರು 12 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ಪಾಕಿಸ್ತಾನದ ಇತರ ಭಾಗಗಳಿಗೂ ಹರಡಿದ್ದು, ಕರಾಚಿಯಲ್ಲಿ ನೂರಾರು ಜನರು ಬೀದಿಗಿಳಿದಿದ್ದಾರೆ. ಇಸ್ಲಾಮಾಬಾದ್‌ನಲ್ಲಿರುವ ರಾಷ್ಟ್ರೀಯ ಪ್ರೆಸ್ ಕ್ಲಬ್‌ಗೆ ಗುರುವಾರ ನುಗ್ಗಿರುವ ಪೊಲೀಸರು, ಪಿಒಕೆಯಲ್ಲಿ ನಡೆದ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪತ್ರಕರ್ತರು ಮತ್ತು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶೌಕತ್ ನವಾಜ್ ಮಿರ್, ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಅವರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದು, ಈ ಸರ್ಕಾರ ಮಾಟಗಾತಿಯಂತೆ ಬೇಟೆ ನಡೆಸುತ್ತಿದೆ.
