ಉದಯವಾಹಿನಿ, ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ 12 ಅಡಿ ಉದ್ದ 12 ವರ್ಷ ಪ್ರಾಯದ 250 ಕೆಜಿಗೂ ಅಧಿಕ ತೂಕದ ಹುಲಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಅಲ್ಲದೇ ಪಿಸಿಸಿಎಫ್ ನೇತೃತ್ವದ ತಂಡ ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಘಟನೆಯ ಬಗ್ಗೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು,ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಆದ್ರೆ ಈ ಹುಲಿ ಹತ್ಯೆಯೂ ಕೂಡ ಪ್ರತೀಕಾರಕ್ಕೆ ನಡೆದಿದೆ ಅನ್ನೋ ವಾದ ಪರಿಸರವಾದಿಗಳಾಗಿದ್ದಾಗಿದೆ.
ಮಲೆ ಮಹದೇಶ್ವರ ವನ್ಯಧಾಮದ ಹನೂರು ತಾಲೂಕಿನ ಪಚ್ಚೆದೊಡ್ಡಿ ಗಸ್ತಿನಲ್ಲಿ ದೈತ್ಯ ಹುಲಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಈ ಹುಲಿಯ ಹತ್ಯೆ ನಡೆದಿರುವುದೇ ಪ್ರತೀಕಾರಕ್ಕೆ ಎಂಬ ಆತಂಕಕಾರಿ ವಿಚಾರ ಗೊತ್ತಾಗ್ತಿದೆ. ಸತ್ತ ಹುಲಿಯನ್ನು ಹೊತ್ತೊಯ್ಯಲು ಸಾಧ್ಯವಾಗದ ಕಾರಣ ಮೂರು ಭಾಗಗಳಾಗಿ ತುಂಡರಿಸಿ ಸಾಗಿಸುವ ಯತ್ನ ಮಾಡಿದ್ದಾರೆ. ಆದ್ರೆ ಹುಲಿಯ ತೂಕ ಹೆಚ್ಚಿದ ಕಾರಣ ಹೊತ್ತೊಯ್ಯಲು ಸಾಧ್ಯವಾಗಿಲ್ಲ. ಎರಡು ಭಾಗಗಳನ್ನು ಒಂದು ಪೊಟರೆಯಲ್ಲಿಟ್ಟು ಅದರ ಮೇಲೆ ಎಲೆಗಳನ್ನು ಮುಚ್ಚಿದ್ದರು. ಮತ್ತೊಂದು ಭಾಗವನ್ನು ಅರ್ಧ ಮಣ್ಣಿನಲ್ಲಿ ಮುಚ್ಚಿದ್ದರು. ಈ ಹುಲಿಯ ಹತ್ಯೆಯ ಬಗ್ಗೆ ಯಾರಿಗೂ ಗೊತ್ತಾಗಬಾರದೆಂದು ದುರುಳರು ಸಖತ್ ಪ್ಲ್ಯಾನ್ ಮಾಡಿದ್ದರು.
ಮರಣೋತ್ತರ ಪರೀಕ್ಷೆ ನಡೆಸಿದರು ಕೂಡ ಹುಲಿಯ ಸಾವಿಗೆ ನಿಖರ ಕಾರಣ ಗೊತ್ತಾಗಬಾರದೆಂದು ಹುಲಿಯ ಕರುಳು ಹಾಗೂ ಲಿವರ್ ಎರಡನ್ನೂ ಕೂಡ ಬೇರೆಡೆ ತೆಗೆದುಕೊಂಡು ಹೋಗಿ ಬಿಸಾಕಿ ಸಾಕ್ಷ್ಯ ನಾಶಕ್ಕೂ ಕೂಡ ಮುಂದಾಗಿದ್ದಾರೆಂಬ ಆತಂಕಕಾರಿ ಸತ್ಯ ಹೊರ ಬಿದ್ದಿದೆ.
