ಉದಯವಾಹಿನಿ, ಬೆಂಗಳೂರು: ನಗರದಲ್ಲಿ ತಡವಾಗಿ ಆರಂಭವಾಗಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಹತ್ತಾರು ವಿಘ್ನ ಎದುರಾಗಿದೆ. ಹೀಗಾಗಿ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಗೊಂದಲಗಳ ನಿವಾರಣೆಗೆ ಆಗ್ರಹಿಸಿ ನೂರಾರು ಜನ ಗಣತಿದಾರರು ಪ್ರತಿಭಟನೆ ನಡೆಸಿದರು.
ಬಹಳಷ್ಟು ಜನ ಗಣತಿದಾರರು ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಿಂದ ಸಮೀಕ್ಷೆಗೆ ಹೋಗದೇ ಗೊಂದಲಗಳಿಂದಾಗಿ ಪರದಾಡಿದರು. ವಾರ್ಡ್‌ಗಳ ಹಂಚಿಕೆಯಲ್ಲಿ ಗೊಂದಲ, ರೋಗಿಗಳನ್ನೂ ಗಣತಿಗೆ ನೇಮಕ, ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಸೇರಿ ಹತ್ತಾರು ಗೊಂದಲಗಳಿಂದಾಗಿ ಮೊದಲ ದಿನವೇ ಸಮೀಕ್ಷೆಗೆ ವಿಘ್ನ ಎದುರಾಗಿದೆ. ಗೊಂದಲಗಳ ಬಗೆಹರಿಸಲು ಆಗ್ರಹಿಸಿ ಜಿಬಿಎ ಅಧಿಕಾರಿಗಳ ಜೊತೆ ಗಣತಿದಾರರು ವಾಗ್ವಾದ ನಡೆಸಿದರು.
ತಮ್ಮ ಕ್ಷೇತ್ರ ಬಿಟ್ಟು 30-40 ಕಿ.ಮೀ ದೂರದ ಕ್ಷೇತ್ರಗಳಿಗೆ ಸಮೀಕ್ಷೆಗೆ ನಿಯೋಜನೆ ಮಾಡಿದ್ದಾರೆ. ಜೊತೆಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗಣತಿದಾರರು ಬೇಸರ ಹೊರಹಾಕಿದರು.
