ಉದಯವಾಹಿನಿ, ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಮೂರು ಗಂಟೆಗಳ ಕಾಲ ಸ್ರ್ಯಾಪ್ ಗೋಡೌನ್ ಹೊತ್ತಿ ಉರಿದ ಘಟನೆ ಬೇಗೂರಿನ ಅಕ್ಷಯನಗರದಲ್ಲಿ ನಡೆದಿದೆ. ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಗೋಡೌನ್‌ಗೆ ಹಬ್ಬಿದೆ. ಪೇಪರ್ ಮತ್ತು ಕಾಟನ್ ಬಾಕ್ಸ್‌ಗಳಿಗೆ ಬೆಂಕಿ ಹೊತ್ತಿ ಉರಿದಿದೆ. ಪರಿಣಾಮ ಇಡೀ ಗೋಡೌನ್ ಸುಟ್ಟು ಭಸ್ಮವಾಗಿದೆ. ಘಟನಾ ಸ್ಥಳಕ್ಕೆ 6 ಅಗ್ನಿಶಾಮಕ ವಾಹನಗಳು ಬಂದಿದ್ದು, ಬೆಂಕಿ ನಿಂತ್ರಣಕ್ಕೆ ಬಂದಿದೆ.
ಅದೃಷ್ಟವಶಾತ್ ಬೆಂಕಿ ಅವಗಡದಿಂದ ಬೇರೆ ಸಿಲಿಂಡರ್ ಸ್ಪೋಟಿಸಿಲ್ಲ. ಇದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಲಕ್ಷಾಂತರ ರೂ. ಮೌಲ್ಯದ ಗುಜರಿ ವಸ್ತುಗಳು ಸುಟ್ಟು ಭಸ್ಮವಾಗಿದೆ.
