ಉದಯವಾಹಿನಿ,ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಈ ನಡುವೆ ರಕ್ಷಿತ್ ಶೆಟ್ಟಿ ಹೊಸ ಕನಸಿನ ಬೆನ್ನು ಹತ್ತಿದ್ದಾರೆ. ಕಥೆಗಾರ ರಕ್ಷಿತ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರಂತೆ. ಗುರು ಪೂರ್ಣಿಮೆ ದಿನವಾದ ಇಂದು ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ತನ್ನ ಸಿನಿ ಕೆರಿಯರ್ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ಮತ್ತೆ ತಾನು ನಿರ್ದೇಶಕನ ಕುರ್ಚಿಯಲ್ಲಿ ಕುಳಿತುಕೊಂಡು ಆಯಕ್ಷನ್ ಕಟ್ ಹೇಳಲು ರೆಡಿಯಾಗಿರುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಸಿನಿಮಾವನ್ನು ಕನಸಾಗಿಸಿಕೊಂಡಿರುವ ನಟ ರಕ್ಷಿತ್ ಶೆಟ್ಟಿ, ಸಿನಿಮಾ ತನ್ನ ಜೀವನವನ್ನು ಹೇಗೆಲ್ಲಾ ಆವರಿಸಿಕೊಂಡಿದೆ. ಸೋಲು ಗೆಲುವಿನ ನಡುವೆ ರಕ್ಷಿತ್ ಬೆಳೆದ ರೀತಿ ಬಗ್ಗೆ ವಿಡಿಯೋ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 1 ರಂದು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತೆರೆ ಮೇಲೆ ಬರಲಿದೆ. ರಕ್ಷಿತ್ ಸಿನಿಮಾಗಾಗಿ ಅಭಿಮಾನಿಗಳು ಕೂಡ ಕಾಯ್ತಿದ್ದಾರೆ. ಸಿನಿಮಾಗಳಲ್ಲಿ ನಟನಾಗಿ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ ಇದೀಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಕುರ್ಚಿಯಲ್ಲಿ ಕುಳಿತು ಮೈಕ್ ಹಿಡಿದುಕೊಂಡು ಆಯಕ್ಷನ್ ಕಟ್ ಹೇಳುವ ಕನಸು ನನ್ನದು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ರಿಚರ್ಡ್ ಆಂಟನಿ ಹಾಗೂ ಪುಣ್ಯಕೋಟಿ ಸಿನಿಮಾಗಳನ್ನು ಅವರು ನಿರ್ದೇಶನ ಮಾಡುತ್ತಿದ್ದಾರೆ.
