ಉದಯವಾಹಿನಿ,ನವದೆಹಲಿ:  ಜುಲೈ 14 ಮತ್ತು 16 ರಂದು ಸಿಲ್ಹೆಟ್‌ ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿಗಾಗಿ ಅಫ್ಘಾನಿಸ್ತಾನದ ಟಿ20 ತಂಡವನ್ನು ಪ್ರಕಟಿಸಲಾಗಿದೆ. ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಿದೆ. ಈ ಟೂರ್ನಿಯ ಮೂಲಕ ವಿಕೆಟ್-ಕೀಪರ್ ಕಂ ಬ್ಯಾಟ್ಸ್‌ಮನ್ ಮೊಹಮ್ಮದ್ ಶಹಜಾದ್ ತಂಡಕ್ಕೆ ಮರಳಿದ್ದಾರೆ. ಮೊಹಮ್ಮದ್ ಶಹಜಾದ್ ಅಫ್ಘಾನಿಸ್ತಾನ ಪರ 70 ಟಿ20 ಪಂದ್ಯಗಳನ್ನು ಆಡಿದ್ದು, 2015 ರಲ್ಲಿ ಒಂದು ಶತಕ ಮತ್ತು 12 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಬುಧಾಬಿಯಲ್ಲಿ 2021 ರ ಪುರುಷರ T20 ವಿಶ್ವಕಪ್‌ ನ ಸೂಪರ್ 12 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸ್ವರೂಪದಲ್ಲಿ ಮೊಹಮ್ಮದ್ ಶಹಜಾದ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ಮೊದಲ ಓವರ್’ನಲ್ಲೇ 4 ವಿಕೆಟ್ ಉಡೀಸ್! ಕ್ರಿಕೆಟ್ ದಿಗ್ಗಜನ ಅಳಿಯನ ಸ್ಫೋಟಕ ಬೌಲಿಂಗ್’ಗೆ ವಿಶ್ವದಾಖಲೆ ಸೃಷ್ಟಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ, ಅಫ್ಘಾನಿಸ್ತಾನ ತಂಡದಲ್ಲಿ ವಿರಾಟ್ ಕೊಹ್ಲಿಯ ಶತ್ರುವನ್ನು ಸೇರಿಸಿಕೊಳ್ಳುವ ಮೂಲಕ ಆಯ್ಕೆದಾರರು ಸಂಚಲನ ಮೂಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಅಫ್ಘಾನಿಸ್ತಾನ ತಂಡದಲ್ಲಿ ನವೀನ್-ಉಲ್-ಹಕ್ ಕೂಡ ಸ್ಥಾನ ಪಡೆದಿದ್ದಾರೆ. ಐಪಿಎಲ್ 2023 ರಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್-ಉಲ್-ಹಕ್ ನಡುವೆ ಸಾಕಷ್ಟು ವಿವಾದಗಳು ನಡೆದಿದ್ದವು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ ಪಂದ್ಯದ ನಂತರ ನವೀನ್-ಉಲ್-ಹಕ್ ವಿರಾಟ್ ಕೊಹ್ಲಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ವರದಿಗಳಿವೆ.

Leave a Reply

Your email address will not be published. Required fields are marked *

error: Content is protected !!