ಉದಯವಾಹಿನಿ, ಬೆಂಗಳೂರು: ಸಿಎಂ ಸ್ಥಾನ ಕುರಿತ ಹೇಳಿಕೆಗಳಿಂದ ಗೊಂದಲ ಆಗ್ತಿರುವುದನ್ನು ಹೈಕಮಾಂಡ್ ಬ್ರೇಕ್ ಹಾಕಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಮಾತಾಡಿದ ಅವರು, ಗೊಂದಲ ಬಗೆಹರಿಸಬೇಕೆಂಬ ಸತೀಶ್ ಜಾರಕಿಹೊಳಿ ಅವ್ರು ಹೇಳಿರೋದು ಸರಿ ಇದೆ. ನಿತ್ಯ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡ್ತಿದ್ದಾರೆ. ಇದನ್ನು ಬಗೆಹರಿಸಬೇಕು. ಇದನ್ನು ಬಗೆಹರಿಸುವ ಕೆಲಸ ಹೈಕಮಾಂಡ್ ಮಾಡುತ್ತೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತದೆ. ಯಾವ ಸಂದರ್ಭದಲ್ಲಿ ಯಾವ ಔಷಧ ಕೊಡಬೇಕು ಅಂತ ಹೈಕಮಾಂಡ್‌ಗೆ ಗೊತ್ತಿದೆ. ಆ ಔಷಧ ಹೈಕಮಾಂಡ್ ಕೊಡುತ್ತೆ. ಗೊಂದಲಗಳನ್ನು ಬಗೆಹರಿಸಬೇಕು ಅಂತ ‌ನಾನೂ ಹೈಕಮಾಂಡ್‌ಗೆ ಒತ್ತಾಯಿಸ್ತೇನೆ ಎಂದಿದ್ದಾರೆ.
ಬಿಹಾರ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಬದಲಾವಣೆಗಳಾಗಲಿವೆ ಎಂಬ ವಿಚಾರವಾಗಿ, ಬದಲಾವಣೆಗಳನ್ನು ಮಾಡಲು ಚುನಾವಣೆಯೇ ಆಗಬೇಕು ಅಂತೇನಿಲ್ಲ. ಬದಲಾವಣೆ ಮಾಡೋದಿದ್ರೆ ಹೈಕಮಾಂಡ್‌ನವ್ರು ಮಾಡ್ತಾರೆ. ಸಿಎಂಗೆ ಆಗಲೀ ಡಿಸಿಎಂಗೆ ಆಗಲೀ ಎಲ್ರಿಗೂ ಜವಾಬ್ದಾರಿ ಇದೆ. ಒಂದು ಕಡೆ ಪ್ರವಾಹ ಆಗ್ತಿದೆ, ಆ ಕಡೆ ಗಮನ ಕೊಡಬೇಕು. ಸಮಸ್ಯೆಗಳನ್ನು ಬಗೆಹರಿಸುವತ್ತ ನಾವು ಗಮನ ಕೊಡಬೇಕು. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತದೆ. ಆದ್ರೆ ಈಗ ನಮ್ಮ ಆಧ್ಯತೆ ಏನು ಅಂತ ನೋಡಬೇಕು ಎಂದರು.
ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರ ಹೈಕಮಾಂಡ್ ಗಮನಕ್ಕೆ ಹೋಗಿಲ್ಲ. ಶಾಸಕರು, ಮಂತ್ರಿಗಳ ಭಿನ್ನಾಭಿಪ್ರಾಯದಿಂದ ಗೃಹ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ಗೊಂದಲ ಆಗಿದೆ ಅನ್ನೋದನ್ನು ಅಲ್ಲಗಳೆದಿದ್ದು, ನಮ್ಮ ಇಲಾಖೆಯಲ್ಲಿ ವರ್ಗಾವಣೆಗೆ ಅಂತ ನಿಗದಿತ ಸಮಯ ಇಲ್ಲ. 365 ದಿವಸವೂ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಆಗುತ್ತಿರುತ್ತೆ. ಯಾಕೆಂದರೆ ಎಲ್ಲೋ ಖಾಲಿ ಇರುತ್ತೆ ಅದನ್ನ ತುಂಬಬೇಕು. ಯಾರೋ ಅಮಾನತು ಆಗ್ತಾರೆ ಆ ಸ್ಥಾನ ತುಂಬಬೇಕು. ನಿವೃತ್ತಿ ಆಗ್ತಾರೆ ಅದನ್ನ ತುಂಬಬೇಕು. ಹೊಸ ನೇಮಕಾತಿ ಆಗುತ್ತೆ ಅವರಿಗೆ ಪೋಸ್ಟಿಂಗ್ ನೀಡಬೇಕು. ಪೊಲೀಸ್ ಇಲಾಖೆಯಲ್ಲಿ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ ಇದೆ. ಅಲ್ಲಿ ವರ್ಗಾವಣೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತೆ. ಸಬ್ ಇನ್ಸ್‌ಪೆಕ್ಟರ್‌, ಪಿಸಿಗಳಗಳ ವರ್ಗಾವಣೆ ಆಯಾ ಐಜಿಗಳು ತೀರ್ಮಾನ ಮಾಡ್ತಾರೆ. ನಿನ್ನೆ ಸಹ ಸಬ್ ಇನ್ಸ್ಪೆಕ್ಟರ್, ಡಿವೈಎಸ್ಪಿಗಳನ್ನ ವರ್ಗಾವಣೆ ಮಾಡಿದ್ದೀವಿ. ಇದ್ಯಾವುದೂ ಹೈಕಮಾಂಡ್ ಗಮನಕ್ಕೆ ಏನು ಹೋಗಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!