ಉದಯವಾಹಿನಿ, ಸದ್ಯದಲ್ಲಿ ನಮಗೆ ಲಾಟರಿ ಎಂದಾಕ್ಷಣ ನೆನಪು ಆಗೋದು ಕೇರಳ. ಹಲವರ ಹಣೆಬರಹವನ್ನೇ ಈ ಲಾಟರಿ ಬದಲಾವಣೆ ಮಾಡಿದೆ. ಒಂದು ಲಾಟರಿ ಕೈ ಹಿಡಿದರೆ ಸಾಕು, ರಾತ್ರೋರಾತ್ರಿ ಲಕ್ಷಾಧಿಪತಿ, ಕೋಟ್ಯಾಧಿಪತಿ ಆಗ್ತಾರೆ. ಆರ್ಥಿಕ ಸಂಕಷ್ಟದಿಂದ ಜೀವನ ಮುಗಿತು ಅನ್ನೋ ಸಂದರ್ಭದಲ್ಲಿ ಲಾಟರಿ ರೂಪದಲ್ಲಿ ಅದೃಷ್ಟ ಹಲವರ ಕೈ ಹಿಡಿದಿದೆ. ಸದ್ಯ ಓಣಂ ಹಬ್ಬದ ವಿಶೇಷವಾಗಿ ನಡೆದ ಬಂಪರ್ ಲಾಟರಿ, ಓರ್ವ ಬಣ್ಣದಂಗಡಿಯ ಕೆಲಸಗಾರನ ಹಣೆಬರಹವನ್ನ ಬದಲಾವಣೆ ಮಾಡಿದೆ.
ಕೇರಳ ರಾಜ್ಯದಲ್ಲಿ ಲಾಟರಿ ಇಲಾಖೆ ನಿರ್ವಹಿಸುವ ಓಣಂ ಬಂಪರ್ ಲಾಟರಿಯಲ್ಲಿ ಶರತ್ ನಾಯರ್ ಎಂಬ ವ್ಯಕ್ತಿ ಒಂದೆರಡಲ್ಲ ಒಟ್ಟಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾನೆ. ಈ ಸುದ್ದಿಯೂ ಸ್ಥಳೀಯರಲ್ಲಿ ಸಂಚಲನವನ್ನು ಉಂಟು ಮಾಡಿದೆ. ಶರತ್ ನಾಯರ್ ಮೂಲತಃ ಅಲಪ್ಪುಜದಲ್ಲಿನ ತುರವೂರ್ ಗೆ ಸೇರಿದವರು, ಕಳೆದ 12 ವರ್ಷಗಳಿಂದ ಒಂದು ಪೇಂಟ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕೇರಳ ಲಾಟರಿಯಲ್ಲಿ ಟಿಎಚ್ 577825 ಎಂಬ ಟಿಕೆಟ್ ಖರೀದಿ ಮಾಡಿದ್ದರು. ಈ ಲಾಟರಿಯಲ್ಲಿ ಇತ್ತೀಚೆಗೆ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದ್ದು, ಶರತ್ ನಾಯರ್ ಖರೀದಿಸಿದ ಟಿಕೆಟ್ ಗೆ ಲಾಟರಿ ಬಂದಿದ್ದು, ಸೋಮವಾರ ಆತ ಯಾರು ಅನ್ನೋದು ರಿವೀಲ್ ಆಗಿದೆ.
ಬಂಪರ್ ಲಾಟರಿ ಪಡೆದ ಶರತ್ ಕುಮಾರ್ ಈ ಕುರಿತು ಮಾತನಾಡಿದ್ದು, ನಾನು ಅಪರೂಪಕ್ಕೆ ಲಾಟರಿ ಟಿಕೆಟ್ ಖರೀದಿ ಮಾಡ್ತೀನಿ. ಆದರೆ ಮೆಗಾ ಬಂಪರ್ ಲಾಟರಿಯದ ಕಾರಣ ಇದೇ ಮೊದಲ ಬಾರಿಗೆ ಟಿಕೆಟ್ ಖರೀದಿ ಮಾಡಿದ್ದೆ. ನಾನು ಖರೀದಿ ಮಾಡಿದ ಟಿಕೆಟ್ ಗೆ ಲಾಟರಿ ಬಂದಿದೆ ಅಂತ ಗೊತ್ತಾದ ವೇಳೆ ಸಖತ್ ಅಚ್ಚರಿ ಆಯ್ತು. ಇದು ನಿಜನಾ ಅಂತ ಖಚಿತಪಡಿಸಿಕೊಳ್ಳಲು ನಾಲ್ಕೈದು ಬಾರಿ ಚೆಕ್ ಮಾಡಿಕೊಂಡಿದ್ದೆ. ನಾನು ಖರೀದಿ ಮಾಡಿದ ಟಿಕೆಟ್ ಗೆ ಲಾಟರಿ ಸಿಕ್ಕಿರೋದು ಸಂತಸ ತಂದಿದೆ ಎಂದು ಹೇಳಿದ್ದಾರೆ.
