ಉದಯವಾಹಿನಿ, ಗಾಜಾ: ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಬೆಂಬಲಿತ ಯೋಜನೆ ಕುರಿತು ಒಪ್ಪಂದಕ್ಕೆ ಬರಲು ಇಸ್ರೇಲ್ ಮತ್ತು ಹಮಾಸ್ ಅಧಿಕಾರಿಗಳು ಈಜಿಪ್ಟ್​​ನ ರೆಸಾರ್ಟ್​ ನಗರವಾದ ಶರ್ಮ್​ ಅಲ್-ಶೇಖ್​ನಲ್ಲಿ ಪರೋಕ್ಷ ಮಾತುಕತೆ ನಡೆಸುತ್ತಿದ್ದಾರೆ. ಹಲವು ಪ್ಯಾಲೆಸ್ತೀನ್ ಕೈದಿಗಳಿಗೆ ಬದಲಾಗಿ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ವಿನಿಮಯ ಒಪ್ಪಂದದ ಕುರಿತು ಚರ್ಚೆಗಳು ನಡೆಯುತ್ತಿವೆ.
ಅಧ್ಯಕ್ಷ ಟ್ರಂಪ್ ಅವರ ಪ್ರಸ್ತಾವನೆಯಲ್ಲಿರುವ ವಿನಿಮಯ ಸೂತ್ರಕ್ಕೆ ಅನುಗುಣವಾಗಿ, ಎಲ್ಲಾ ಇಸ್ರೇಲಿ ಕೈದಿಗಳನ್ನು, ಬಿಡುಗಡೆ ಮಾಡಲು ಒಪ್ಪಿಕೊಂಡಿರುವುದಾಗಿ ಹಮಾಸ್ ಹೇಳಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮುಂದಿನ ದಿನಗಳಲ್ಲಿ ಒತ್ತೆಯಾಳುಗಳ ಬಿಡುಗಡೆಯನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಶನಿವಾರ ಹೇಳಿದ್ದಾರೆ. ಕೈದಿಗಳ ಬಿಡುಗಡೆ ಮತ್ತು ಕದನ ವಿರಾಮ ಸೇರಿದಂತೆ ಮೊದಲ ಹಂತದ ಹೆಚ್ಚಿನ ವಿಷಯಗಳ ಬಗ್ಗೆ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು. ಇಂದು ಕೂಡ ಕೂಡ ಮಾತುಕತೆ ಮುಂದುವರೆಯಲಿದೆ. ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನೇತೃತ್ವದ ದಾಳಿ ನಡೆಸಿ ಇಂದಿಗೆ ಎರಡು ವರ್ಷ. ಈ ಸಂದರ್ಭದಲ್ಲಿ ಮಾತುಕತೆಗಳು ನಡೆಯಲಿವೆ, ಈ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದರು ಮತ್ತು 251 ಒತ್ತೆಯಾಳುಗಳನ್ನು ಬಂಧಿಸಲಾಗಿತ್ತು.
ಅಂದಿನಿಂದ, ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳು ಪ್ಯಾಲೆಸ್ಟೈನ್‌ನಲ್ಲಿ 67,160 ಜನರನ್ನು ಕೊಂದಿವೆ ಎಂದು ಗಾಜಾದ ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ. ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್, ಶ್ವೇತಭವನದ ಮಾಜಿ ಸಲಹೆಗಾರ ಜೇರೆಡ್ ಕುಶ್ನರ್ ಮತ್ತು ಕತಾರ್ ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ಥಾನಿ ಮಾತುಕತೆಯಲ್ಲಿ ಭಾಗವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!