ಉದಯವಾಹಿನಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಸಂಕಷ್ಟಗಳು ಹೆಗಲೇರಿಕೊಂಡಿವೆ. 60 ಕೋಟಿ ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾಗೆ ಭಾರಿ ಹಿನ್ನಡೆಯಾಗಿದೆ. ಅಮೆರಿಕದ ಲಾಸ್ ಏಂಜಲೀಸ್‌ ಸೇರಿದಂತೆ ಇತರ ದೇಶಗಳ ಪ್ರವಾಸಕ್ಕೆ ತೆರಳಲು ಮುಂದಾಗಿದ್ದ ಶಿಲ್ಪಾ ಶೆಟ್ಟಿ ದಂಪತಿಗೆ ಬಾಂಬೆ ಹೈಕೋರ್ಟ್‌ ತಡೆ ನೀಡಿದೆ. ವಿದೇಶಕ್ಕೆ ಹೋಗೋದಾದ್ರೆ 60 ಕೋಟಿ ರೂಪಾಯಿ ಠೇವಣಿ ಇಟ್ಟು ಹೋಗಿ ಎಂದು ಖಡಕ್ ಆಗಿ ಹೇಳಿದೆ. 60 ಕೋಟಿ ರೂಪಾಯಿ ವಂಚನೆ ಆರೋಪದಡಿ ತಮ್ಮ ವಿರುದ್ಧ ಹೊರಡಿಸಲಾದ ಲುಕ್‌ಔಟ್‌ ನೋಟಿಸ್ ರದ್ದುಗೊಳಿಸುವಂತೆ ಕೋರಿ ಶಿಲ್ಪಾ ಶೆಟ್ಟಿ, ರಾಜ್‌ಕುಂದ್ರಾ ಬಾಂಬೆ ಕೋರ್ಟ್‌ಗೆ ಅರ್ಜಿ ಲ್ಲಿಸಿದ್ದರು.
ಕಾರ್ಯಕ್ರಮ ನಿಮಿತ್ತ ಲಾಸ್ ಎಂಜಲೀಸ್ ಮತ್ತು ಇತರ ದೇಶಗಳಿಗೆ ತೆರಳಬೇಕಿತ್ತು. ಹೀಗಾಗಿ ಬಾಂಬೆ ಹೈಕೋರ್ಟ್, ಲಾಸ್ ಏಂಜಲೀಸ್ ಮತ್ತು ಇತರ ವಿದೇಶಗಳಿಗೆ ಪ್ರಯಾಣಿಸಲು ಬಯಸಿದರೆ ಮೊದಲು 60 ಕೋಟಿ ರೂಪಾಯಿ ಡೆಪಾಸಿಟ್ ಇಡಿ ಎಂದು ಹೇಳಿದೆ.

ಏನಿದು ಕೇಸ್‌..?: 2015 ರಿಂದ 2023ರ ನಡುವೆ, ದಂಪತಿ ತಮ್ಮ ವ್ಯವಹಾರ ವಿಸ್ತರಿಸುವ ನೆಪದಲ್ಲಿ ನನ್ನಿಂದ 60 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಉದ್ಯಮಿ ದೀಪಕ್ ಕೊಠಾರಿ ಆರೋಪಿಸಿದ್ದರು. ದಂಪತಿ ಹಣವನ್ನು ಸಾಲವಾಗಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
12% ವಾರ್ಷಿಕ ಬಡ್ಡಿಯೊಂದಿಗೆ ನಿರ್ದಿಷ್ಟ ಸಮಯದೊಳಗೆ ಹಣ ಹಿಂತಿರುಗಿಸುವುದಾಗಿ ಶಿಲ್ಪಾ ಶೆಟ್ಟಿ ಭರವಸೆ ನೀಡಿದ್ದರು. 2016ರಲ್ಲಿ ಲಿಖಿತವಾಗಿ ವೈಯಕ್ತಿಕ ಖಾತರಿ ಕೂಡ ನೀಡಿದ್ದರು. ಆದರೆ, ಕೆಲವೇ ತಿಂಗಳುಗಳಲ್ಲಿ ಶಿಲ್ಪಾ ಶೆಟ್ಟಿ ಅವರು ಸಂಸ್ಥೆ ನಿರ್ದೇಶಕಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಉದ್ಯಮಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕೋರ್ಟ್‌ನಲ್ಲಿ ಕೇಸ್‌ ವಿಚಾರಣೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!