ಉದಯವಾಹಿನಿ, ಕಿರುತೆರೆ ಹಾಗೂ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ನಿವೇದಿತಾ ಗೌಡ ಹೊಸ ಹೊಸ ರೀಲ್ಸ್ ಮಾಡುತ್ತಾ ಯಾವಾಗಲೂ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿರ್ತಾರೆ. ತಮ್ಮ ಇನ್ಸ್ಟಾದಲ್ಲಿ ವೆರೈಟಿ ವೆರೈಟಿ ರೀಲ್ಸ್ ಹಾಕುತ್ತಾ ಮನರಂಜನೆ ನೀಡುವ ನಿವೇದಿತಾ ಗೌಡ ಬೀಚ್‍ನಲ್ಲಿ ಮುಸ್ಸಂಜೆ ವೇಳೆ ಜಾಲಿ ಜಾಲಿಯಾಗಿ ನಲಿದಾಡಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ಹಲ್‍ಚಲ್ ಎಬ್ಬಿಸಿದೆ.
ನಿವೇದಿತಾ ಗೌಡ ಬಿಗ್‍ಬಾಸ್ ಹಾಗೂ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಎಷ್ಟು ಖ್ಯಾತಿ ಪಡೆದಿದ್ದರೋ ಅದಕ್ಕಿಂತ ಒಂದು ಕೈ ಜಾಸ್ತಿ ಎನ್ನುವಂತೆ ಅವರ ರೀಲ್ಸ್‌ನಿಂದ ಖ್ಯಾತಿ ಗಳಿಸಿದ್ದಾರೆ ಎಂದರೆ ತಪ್ಪಾಗ್ಲಿಕ್ಕಿಲ್ಲ. ತಮ್ಮ ವೈಯಕ್ತಿ ಜೀವನದಲ್ಲಿ ಆದ ಎಲ್ಲಾ ತೊಡಕುಗಳನ್ನ ಬದಿಗೊತ್ತಿ ಜಾಲಿಯಾಗಿ ರೀಲ್ಸ್ ಮಾಡುತ್ತಾ ದೇಶ ವಿದೇಶ ಸುತ್ತುತ್ತಾ ಕಾಲ ಕಳೆಯುತ್ತಿದ್ದಾರೆ.
ಗೋವಾ ಕಡಲ ಕಿನಾರೆಯಲ್ಲಿ ಬಿಳಿ ಬಣ್ಣದ ತುಂಡುಡುಗೆಯಲ್ಲಿ ಹಾಟ್ ಆಗಿ ನಿವೇದಿತಾ ಗೌಡ ಗಮನಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿನದಿಂದ ದಿನಕ್ಕೆ ಡಿಫರೆಂಟ್ ಡಿಫರೆಂಟ್ ಕಂಟೆಂಟ್ ಹಾಕುತ್ತಿರುವ ನಿವೇದಿತಾಗೌಡ ಬೀಚ್‍ನಲ್ಲಿ ಕುಣಿದು ಕುಪ್ಪಳಿಸಿರುವ ವಿಡಿಯೋ ಹಾಕಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ತಹರೇವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!