ಉದಯವಾಹಿನಿ, ಬೆಂಗಳೂರು,ಅ 09: ಸಿಟಿ ಸಿವಿಲ್ ಕೋರ್ಟ್ ಕಟ್ಟಡದ ಮೇಲಿಂದ ಬಿದ್ದು ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೋರ್ಟ್​ನ 5ನೇ ಮಹಡಿಯಿಂದ ಕೆಳಗೆ ಬಿದ್ದು, ಪೋಕ್ಸೋ ಕೇಸ್ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೋಕ್ಸೋ (POCSO) ಕೇಸ್​ನಲ್ಲಿ ಬಂಧಿತನಾಗಿದ್ದ ಆರೋಪಿ ಗೌತಮ್ ಎಂಬಾತ ಕೋರ್ಟ್​​ ಕಟ್ಟಡದ 5 ನೇ ಫ್ಲೋರ್​ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟ್ರಯಲ್ ಇದ್ದ ಕಾರಣ ಪರಪ್ಪನ ಅಗ್ರಹಾರದಿಂದ ನ್ಯಾಯಾಲಯಕ್ಕೆ ಕರೆತರಲಾಗಿದ್ದು, ಈ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಮೈಸೂರು ಬ್ಯಾಂಕ್ ಬಳಿಯ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ಪೋಕ್ಸೋ ಕೇಸ್​ ಆರೋಪಿ ಗೌತಮ್​ನನ್ನು ಕರೆತಂದಿದ್ದರು. ಈ ವೇಳೆ 5ನೇ ಮಹಡಿಯಿಂದ ಜಿಗಿದು ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕೋರ್ಟ್ ಅಂಗಳದಲ್ಲಿ ಆತಂಕ ಮತ್ತು ಗೊಂದಲದ ವಾತಾವರಣಕ್ಕೆ ಕಾರಣವಾಗಿದೆ.

ಪೋಕ್ಸೋ ಕೇಸ್​ ಆರೋಪಿಯಾಗಿದ್ದ ಗೌತಮ್​: ಗೌತಮ್ ಆಡುಗೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ತಿಂಗಳು ದಾಖಲಾದ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ದೂರು ದಾಖಲಾಗಿದ್ದು, ಗೌತಮ್ ವಿರುದ್ಧ ಸೆಕ್ಷನ್ 6 ಮತ್ತು 10 ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿತ್ತು. ಬಂಧನದ ನಂತರ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲ್ಪಟ್ಟ ಆತನನ್ನು ಇಂದು ಮೊದಲ ಟ್ರಯಲ್‌ಗೆ ಹಾಜರಾಗಲು ಪೊಲೀಸ್ ಜೀಪ್‌ನಲ್ಲಿ ಕೋರ್ಟ್‌ಗೆ ಕರೆತರಲಾಗಿತ್ತು, ಆದರೆ ಈ ವೇಳೆ ಕೈನಿಂದ ಕೋಳಗಳನ್ನು ತೆಗೆದ ಕೂಡಲೇ ಐದನೇ ಮಹಡಿಯಿಂದ ಹಾರಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!