ಉದಯವಾಹಿನಿ, ನವದೆಹಲಿ: ಭಯೋತ್ಪಾದನೆಗೆ ಪ್ರಚೋದನೆ ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು 2016ರಿಂದ ಭಾರತ ತೊರೆದು ಮಲೇಷ್ಯಾದಲ್ಲಿ ವಾಸವಾಗಿರುವ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಹಸ್ತಾಂತರಕ್ಕೆ ಭಾರತ 2018ರಿಂದ ಮಲೇಷ್ಯಾ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದೆ. ಆದರೆ ಇದೀಗ ಆತನನ್ನು ಭಾರತಕ್ಕೆ ಒಪ್ಪಿಸಲು ಮಲೇಷ್ಯಾ ಸರ್ಕಾರ ಒಪ್ಪಿಕೊಂಡಿದೆ ಎನ್ನಲಾಗಿದೆ. ಈ ಭಾರತದೊಂದಿಗೆ ಸಹಕರಿಸುವುದಾಗಿ ಹೇಳಿರುವ ಭಾರತದಲ್ಲಿನ ಮಲೇಷ್ಯಾದ ಹೈಕಮಿಷನರ್ ಡಾಟೊ ಮುಜಾಫರ್ ಶಾ ಮುಸ್ತಫಾ ಮಲೇಷ್ಯಾ ಎರಡು ರಾಷ್ಟ್ರಗಳ ನಡುವಿನ ಹಸ್ತಾಂತರ ಒಪ್ಪಂದವನ್ನು ಸಂಪೂರ್ಣವಾಗಿ ಪಾಲಿಸುತ್ತದೆ ಎಂದು ತಿಳಿಸಿದರು.ಝಾಕಿರ್ ನಾಯಕ್ ಹಸ್ತಾಂತರಕ್ಕೆ ಪ್ರಕ್ರಿಯೆಯು ಕಾನೂನು ಮತ್ತು ನ್ಯಾಯಾಂಗ ಕಾರ್ಯವಿಧಾನಗಳನ್ನು ಅನುಸರಿಸುತ್ತದೆ ಎಂದು ಹೇಳಿರುವ ಅವರು ಇದಕ್ಕಾಗಿ ಸಮಯ ಬೇಕಾಗಬಹುದು ಎಂದು ತಿಳಿಸಿದ್ದಾರೆ.ಕೌಲಾಲಂಪುರದಲ್ಲಿ ಈ ತಿಂಗಳಾಂತ್ಯಕ್ಕೆ ಆಸಿಯಾನ್ ಶೃಂಗಸಭೆ ನಡೆಯಲಿದ್ದು, ಇದಕ್ಕೂ ಮುನ್ನವೇ ಮಲೇಷ್ಯಾ ಝಾಕಿರ್ ನಾಯಕ್ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದೆ. ಭಾರತದ ವಿರೋಧ ಹೇಳಿಕೆ, ಉಪದೇಶ ನೀಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಝಾಕಿರ್ ನಾಯ್ಕ್ 2016ರಲ್ಲಿ ಭಾರತವನ್ನು ತೊರೆದಿದ್ದು, ಬಳಿಕ ಮಲೇಷ್ಯಾದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. 2018ರಿಂದ ಆತನ ಹಸ್ತಾಂತರಕ್ಕೆ ಭಾರತ ಮನವಿ ಮಾಡುತ್ತಿದ್ದು, ಈ ಪ್ರಕರಣವು ಮಲೇಷ್ಯಾದ ನ್ಯಾಯಾಲಯಗಳಲ್ಲಿ ಬಾಕಿಯಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೈಕಮಿಷನರ್ ಮುಜಾಫರ್ ಶಾ, ಭಾರತದೊಂದಿಗೆ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದವನ್ನು ಹೊಂದಿದ್ದೇವೆ ಮತ್ತು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸುವುದು ಮುಖ್ಯ. ಝಾಕಿರ್ ನಾಯ್ಕ್‌ ಪ್ರಕರಣವು ಮಲೇಷ್ಯಾದ ನ್ಯಾಯಾಲಯದಲ್ಲಿದೆ. ನ್ಯಾಯಾಂಗ ಪರಿಗಣನೆಯ ಆಧಾರದ ಮೇಲೆ ನಿರ್ಧಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಭಾರತ ಸರ್ಕಾರವು ಒದಗಿಸಿದ ಪುರಾವೆಗಳು ಅಥವಾ ಕಾರಣಗಳ ಆಧಾರದ ಮೇಲೆ ಪ್ರಕರಣವು ಮುಂದುವರಿಯುತ್ತದೆ ಎಂದಿರುವ ಅವರು, ಈ ವಿಷಯದಲ್ಲಿ ಮಲೇಷ್ಯಾಕ್ಕೆ ಯಾವುದೇ ನೇರ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!