ಉದಯವಾಹಿನಿ, ನವದೆಹಲಿ: ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ಇದೀಗ ಹೊಸ ಯುದ್ಧ ತಂತ್ರವೊಂದನ್ನು ರೂಪಿಸುತ್ತಿದೆ. ಇದರ ಮೂಲಕ ಅದು ಮಹಿಳೆಯರನ್ನೇ ತನ್ನ ಗುರಿಯಾಗಿ ಮಾಡಿಕೊಂಡಿದೆ. ಉನ್ನತ ಗುಪ್ತಚರ ಮೂಲಗಳ ಪ್ರಕಾರ ಇಸ್ಲಾಮಿಕ್ ಸುಧಾರಣೆ ಮತ್ತು ಧರ್ಮನಿಷ್ಠೆ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರನ್ನು ಸೇರಿಸಿಕೊಂಡು ಜೈಶ್-ಎ-ಮೊಹಮ್ಮದ್ ಅತ್ಯಾಧುನಿಕ ಮಹಿಳಾ ಬ್ರಿಗೇಡ್ ಅನ್ನು ಸ್ಥಾಪಿಸುತ್ತಿದೆ. ಈ ಮೂಲಕ ಮಾನಸಿಕ ಯುದ್ಧ ಮತ್ತು ತಳಮಟ್ಟದ ನೇಮಕಾತಿಗಾಗಿ ಜೆಎಂ ಕಾರ್ಯ ಪ್ರಾರಂಭಿಸಿದೆ ಎನ್ನಲಾಗುತ್ತಿದೆ.

ಈ ಕುರಿತು ಜೈಶ್ ಸುತ್ತೋಲೆಯನ್ನು ಹೊರಡಿಸಿದ್ದು, ಇದಕ್ಕಾಗಿ ಮಕ್ಕಾ, ಮದೀನಾದ ಪವಿತ್ರ ಸ್ಥಳಗಳ ಚಿತ್ರ, ಅಲ್ಲಾಹ್ ಹೆಸರು ಮತ್ತು ಕುರಾನ್ ಪದ್ಯಗಳನ್ನು ಉಲ್ಲೇಖಿಸಿ ಮಹಿಳೆಯರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಭಕ್ತಿ ಹೆಸರಲ್ಲಿ ವಿದ್ಯಾವಂತ, ನಗರ ಭಾಗದ ಮಹಿಳೆಯರನ್ನು ಆಕರ್ಷಿಸಲು ಮುಂದಾಗಿದೆ. ಇದರಲ್ಲಿ ಮೊದಲು ಆಧ್ಯಾತ್ಮಿಕ ಬೋಧನೆಯನ್ನು ನೀಡಿ ಬಳಿಕ ರಾಜಕೀಯ ಮತ್ತು ಜಿಹಾದಿ ಸಿದ್ಧಾಂತಕ್ಕೆ ಅವರನ್ನು ಬಳಸುವ ಉದ್ದೇಶವನ್ನು ಹೊಂದಿದೆ.

ಜೈಶ್-ಎ-ಮೊಹಮ್ಮದ್ ಇದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದೆ. ಮಹಿಳಾ ಗುಂಪುಗಳನ್ನು ನೇಮಕಾತಿದಾರರು, ಸಂದೇಶ ಕಳುಹಿಸಲು ಕೊರಿಯರ್‌, ಪ್ರಮುಖ ನಿಧಿಸಂಗ್ರಹಕಾರರಾಗಿ ಬಳಸಲು ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಪುರುಷ ಕಾರ್ಯಕರ್ತರನ್ನು ದೂರವಿಡಲಾಗುವುದು. ಇದು 2024ರ ಜೆಇಎಂನಹೊಸ ತಂತ್ರವಾದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಮಹಿಳಾ ಸಂಪರ್ಕಕ್ಕೆ ಸಾಮಾಜಿಕ ಮಾಧ್ಯಮ ಮತ್ತು ಮದರಸಾ ಸರ್ಕ್ಯೂಟ್‌ಗಳನ್ನುರಹಸ್ಯ ಕಾರ್ಯಾಚರಣೆ ಭಾಗವಾಗಿ ಮಾಡುವ ಯೋಜನೆಯಂತೆ ಇದೆ.

Leave a Reply

Your email address will not be published. Required fields are marked *

error: Content is protected !!