ಉದಯವಾಹಿನಿ, ಬೆಂಗಳೂರು: ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪ ಯಾವುದೇ ಪೊಲಿಟಿಕಲ್ ಮೀಟಿಂಗ್ ಮಾಡಿಲ್ಲ ಎಂದು ಗೃಹಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಮಹದೇವಪ್ಪ, ಪರಮೇಶ್ವರ್, ಸತೀಶ್ ಜಾರಕಿಹೊಳಿ ಅಪಾರ್ಟ್ಮೆಂಟ್‌ನಲ್ಲಿ ಸಭೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಸಭೆಯಲ್ಲಿ ಯಾವುದೇ ವಿಶೇಷ ಇಲ್ಲ. ಮಾಧ್ಯಮಗಳಿಗೆ ಯಾವ ರೀತಿ ಕಣ್ಣಿಗೆ ಕಾಣಿಸುತ್ತೆ ಅಂತ ಗೊತ್ತಿಲ್ಲ. ಹಾಗೆ ಸಭೆ ಮಾಡಿರೋದು ಮೊದಲ ಬಾರಿ ಅಲ್ಲ. ಅನೇಕ ಬಾರಿ ನಾನು ಜಾರಕಿಹೊಳಿ, ಮಹದೇವಪ್ಪ ಸಭೆ ಮಾಡಿದ್ದೇವೆ. ನಾವೆಲ್ಲ ಸ್ನೇಹಿತರು, ಕೆಲವು ವಿಷಯಗಳು ಚರ್ಚೆ ಮಾಡಬೇಕು ಅಂದಾಗ ಭೇಟಿ ಮಾಡುತ್ತೇವೆ. ಅದು ಪೊಲಿಟಿಕಲ್ ಮೀಟಿಂಗ್ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜಣ್ಣ ಮಂತ್ರಿ ಅಲ್ಲ ಅದಕ್ಕೆ ಬಂದಿರಲಿಲ್ಲ. ನಿನ್ನೆ ಕ್ಯಾಬಿನೆಟ್ ಸಭೆ ಇತ್ತು. ಕೆಲವು ವಿಷಯ ಸೂಕ್ಷ್ಮ ಇತ್ತು ಹಾಗೇ ಮಾತಾಡಿಕೊಂಡು, ತಿಂಡಿ ತಿಂದು ಹೋಗೋಣ ಅಂತ ಸಭೆ ಮಾಡಿದ್ವಿ. ಅದೊಂದು ಸಾಮಾನ್ಯ ಮೀಟಿಂಗ್ ಅಷ್ಟೇ. ಈ ಹಿಂದೆ ಬೇಕಾದಷ್ಟು ಬಾರಿ ನಾವು ಸಭೆ ಮಾಡಿದ್ದೇವೆ. ಇದೇನು ಮೊದಲ ಸಭೆ ಅಲ್ಲ. ಸತೀಶ್ ಜಾರಕಿಹೊಳಿ, ಮಹದೇವಪ್ಪ ಮನೆಯಲ್ಲಿ ಅನೇಕ ಬಾರಿ ಮೀಟ್ ಮಾಡಿದ್ದೇವೆ. ಹೊಸದೇನು ಅಲ್ಲ ಎಂದಿದ್ದಾರೆ.
ದಲಿತ ನಾಯಕರ ಬೇಡಿಕೆ ಕಾಂಗ್ರೆಸ್‌ನಲ್ಲಿ ಈಡೇರುತ್ತಿಲ್ಲ ಅಂತ ಯಾರು ಹೇಳಿದ್ರು? ಹೆಚ್ಚುವರಿ ಡಿಸಿಎಂ ಬೇಕು ಅಂತ ನಾನು ಹೇಳಿರಲಿಲ್ಲ. ಯಾರು ಹೇಳಿದ್ರು, ಯಾರು ಒತ್ತಾಯ ಮಾಡಿದ್ರು? ಸತೀಶ್ ಜಾರಕಿಹೊಳಿ, ರಾಜಣ್ಣ ಒತ್ತಾಯ ಮಾಡಿರೋದು ನನಗೆ ಗೊತ್ತಿಲ್ಲ. ಸತೀಶ್ ಜಾರಕಿಹೊಳಿ, ನಾವು ಜನರಲ್ ಆಗಿ ಮಾತಾಡಿದ್ದೇವೆ. ಇದೇ ರೀತಿ ಆಗಬೇಕು ಅಂತ ನಾವ್ಯಾರು ಮಾತಾಡಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!