ಉದಯವಾಹಿನಿ, ಕಾನ್ಪುರ: ರಸ್ತೆ ಮಧ್ಯದಲ್ಲಿ ಪತಿ-ಪತ್ನಿ ನಡುವೆ ಭಾರಿ ಜಗಳ ನಡೆದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿಯನ್ನು ಆತನ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದ ನಂತರ ಜಗಳ ನಡೆದಿದೆ. ಈ ಜಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪತ್ನಿ ಮತ್ತು ಗೆಳತಿ ರಸ್ತೆಯಲ್ಲಿ ಸಾರ್ವಜನಿಕರ ಮುಂದೆ ಹೊಡೆದಾಡಿಕೊಂಡಿದ್ದಾರೆ.
ಕಾನ್ಪುರದ ನರ್ವಾಲ್ ಮಾಡ್ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಹಿಳೆ ತನ್ನ ಪತಿಯನ್ನು ಗೆಳತಿಯೊಂದಿಗೆ ನೋಡಿದ ನಂತರ ಆತನೊಂದಿಗೆ ಜಗಳ ಪ್ರಾರಂಭಿಸಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ ಗೆಳತಿ ಕೂಡ ಮಧ್ಯಪ್ರವೇಶಿಸಿದ್ದಾಳೆ. ಈ ವೇಳೆ ಇಬ್ಬರ ನಡುವೆ ಹೊಡೆದಾಟವೂ ನಡೆದಿದೆ. ಈ ಘಟನೆಯನ್ನು ವ್ಯಕ್ತಿಯೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಮಹಿಳೆ ತನ್ನ ಗಂಡನಿಗೆ ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿದ್ದಳು. ರಸ್ತೆಮಧ್ಯೆ ಅವರಿಬ್ಬರನ್ನು ನೋಡಿದಾಗ ಅವಳ ಸಂಶಯ ನಿಜವಾಯಿತು. ಗಂಡ ಮತ್ತು ಅವನ ಗೆಳತಿ ಅವಳನ್ನು ನೋಡಿ ಆಘಾತಕ್ಕೊಳಗಾದರು. ಈ ವೇಳೆ ಗಂಡನ ಬಳಿ ಬಂದು ಹೆಂಡತಿಯು ಪ್ರಶ್ನಿಸಲು ಪ್ರಾರಂಭಿಸಿದಳು. ಇದು ಪತಿ-ಪತ್ನಿ ನಡುವೆ ನಡುರಸ್ತೆಯಲ್ಲೇ ಜಗಳಕ್ಕೆ ಕಾರಣವಾಯಿತು. ಜಗಳ ತೀವ್ರಗೊಳ್ಳುತ್ತಿದ್ದಂತೆ ಪತಿ ತನ್ನ ಹೆಂಡತಿಯನ್ನು ರಸ್ತೆಯ ಮಧ್ಯದಲ್ಲಿ ಕಪಾಳಮೋಕ್ಷ ಮಾಡಿದನು. ಅಷ್ಟೇ ಅಲ್ಲ, ಆತನ ಗೆಳತಿ ಕೂಡ ಅವನ ಹೆಂಡತಿಯ ಮೇಲೆ ಹಲ್ಲೆ ಮಾಡಿದಳು.

Leave a Reply

Your email address will not be published. Required fields are marked *

error: Content is protected !!