ಉದಯವಾಹಿನಿ, ಲಾಹೋರ್: ಉಗ್ರ ಬಲಪಂಥೀಯ ಸಂಘಟನೆಯಾದ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ ಸದಸ್ಯರು ಶುಕ್ರವಾರ ಲಾಹೋರ್ (Lahore) ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಗೆ ಇಳಿದಿದ್ದರಿಂದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಉದ್ವಿಗ್ನವಾಗಿದೆ. ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ ನ ಲಕ್ಷಾಂತರ ಮಂದಿ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಇದರಿಂದ ರಸ್ತೆಗಳನ್ನು ಮುಚ್ಚಲಾಯಿತು. ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರದಿಂದ ಇಬ್ಬರು ಸಾವನ್ನಪ್ಪಿದ್ದು,12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಜಾದಲ್ಲಿನ ಹತ್ಯೆಯನ್ನು ಖಂಡಿಸಿ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ ನ ಲಕ್ಷಾಂತರ ಸದಸ್ಯರು ಇಸ್ಲಾಮಾಬಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಈ ವೇಳೆ ಲಾಹೋರ್‌ನಲ್ಲಿ ಪೊಲೀಸ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಇದು ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು. ಟಿಎಲ್‌ಪಿ ಪ್ರತಿಭಟನಾಕಾರರು ಹಲವಾರು ವಾಹನಗಳು ಮತ್ತು ಆಸ್ತಿಗಳಿಗೆ ಹಾನಿಗೊಳಿಸಿದ್ದಾರೆ.
ಲಕ್ಷಾಂತರ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನದ ಸದಸ್ಯರು ಇಸ್ಲಾಮಾಬಾದ್‌ನಲ್ಲಿ ಬೀಡು ಬಿಟ್ಟಿದ್ದು, ಇದರಿಂದ ಭದ್ರತೆ ಕೈಗೊಳ್ಳಲಾಗಿದೆ. ಘರ್ಷಣೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದ್ದು,ಪೊಲೀಸ್ ಮೂಲಗಳು ಒಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ, ಲಾಹೋರ್, ಕರಾಚಿ ಮತ್ತು ಪೇಶಾವರದಲ್ಲಿರುವ ಅಮೆರಿಕ ದೂತಾವಾಸಗಳ ಮೇಲೆ ಜನರು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಇಲ್ಲಿಗೆ ಯಾರೂ ಬರಬೇಡಿ ಎಂದು ಕರೆ ನೀಡಲಾಗಿದ್ದು,ಸುತ್ತಮುತ್ತ ಸಭೆ ಸೇರುವುದನ್ನು ನಿಷೇಧಿಸಲಾಗಿದೆ. ಪಾಕಿಸ್ತಾನದಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ.ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು, ತೀವ್ರ ಪ್ರತಿಭಟನೆಗಳ ಕಾರಣದಿಂದ ರಸ್ತೆಗಳನ್ನು ಮುಚ್ಚಲಾಗಿದೆ. ಇದರಿಂದ ಸಂಚಾರ ವಿಳಂಬ, ತಿರುವುಗಳ ಮೂಲಕ ಬರಬೇಕಾಗುವುದು. ಪ್ರತಿಭಟನೆಗಳು ಎಷ್ಟು ಸಮಯದವರೆಗೆ ನಡೆಯುತ್ತದೆ ಎಂಬುದು ತಿಳಿದಿಲ್ಲ ಎಂದು ತಿಳಿಸಿದೆ.ಲಾಹೋರ್ ಪೊಲೀಸರೊಂದಿಗಿನ ಘರ್ಷಣೆಯ ಬಳಿಕ ಟಿಎಲ್‌ಪಿ ಲಾಹೋರ್‌ನಲ್ಲಿ ನಾಗರಿಕರು ಒಟ್ಟುಗೂಡಲು ತನ್ನ ಬೆಂಬಲಿಗರನ್ನು ಕರೆಸಿಕೊಂಡಿದೆ. ತೆಹ್ರೀಕ್-ಇ-ಲಬೈಕ್ ಯಾ ರಸೂಲ್ ಅಲ್ಲಾ ಎಂಬ ಧಾರ್ಮಿಕ ರಾಜಕೀಯ ಗುಂಪಿನ ಭಾಗವಾದ ತೀವ್ರ ಬಲಪಂಥೀಯ ಟಿಎಲ್ಪಿ ಪ್ಯಾಲೆಸ್ಟೀನಿಯನ್ನರಿಗೆ ಬೆಂಬಲ ನೀಡಲು ಇಸ್ಲಾಮಾಬಾದ್ ನಲ್ಲಿ ಹೋರಾಟವನ್ನು ಪ್ರಾರಂಭಿಸಿದೆ.
