ಉದಯವಾಹಿನಿ, ಫ್ಲೋರಿಡಾ: ಮಹಿಳೆಯೊಬ್ಬರು 5.8 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದೀಗ ಈ ಮಗುವನ್ನು ವಿಶ್ವದ ಅತ್ಯಂತ ದೈತ್ಯ ಗಾತ್ರದ ಮಗು ಎಂದು ಹೇಳಲಾಗಿದೆ. ಟೆನ್ನೆಸ್ಸೀಯ ನ್ಯಾಶ್ವಿಲ್ಲೆಯ ಶೆಲ್ಬಿ ಮಾರ್ಟಿನ್ ಎಂಬುವರು ಇತ್ತೀಚೆಗೆ ಈ ದೈತ್ಯ ಆಕಾರದ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರ ತಿಳಿದು ಸೋಶಿಯಲ್ ಮೀಡಿಯಾ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಹಾಸ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಅಸಾಧರಣ ಗಾತ್ರದ ಮಗು, ಜನನದಲ್ಲಿ ನೈಸರ್ಗಿಕ ವ್ಯತ್ಯಾಸದಿಂದ ಈ ಮಗುವಿನ ಜನ್ಮ ಆಗಿದೆ. ಹೆರಿಗೆಯ ಸಮಯದಲ್ಲಿ ತಾಯಂದಿರಿಗೆ ಅಗತ್ಯವಿರುವ ಶಕ್ತಿ ಹಾಗೂ ಸರಿಯಾದ ಅರೋಗ್ಯ ಕಾಳಜಿ ಬೇಕಾಗುತ್ತದೆ. ಮಗುವಿನ ಪಾಲನೆ ಹಾಗೂ ಅದರ ಕಾಳಜಿಯ ಬಗ್ಗೆ ತಾಯಿ ಸೇವೆಯನ್ನು ಮೆಚ್ಚಲೇಬೇಕು. ಹಾಗೂ ವೈದ್ಯರ ಪ್ರಯತ್ನಕ್ಕೆ ಶ್ಲಾಘನೆ ಮಾಡಲೇಬೇಕು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಶೆಲ್ಬಿ ಮಾರ್ಟಿನ್ ತಮ್ಮ ಹೆರಿಗೆಗೂ ಮುನ್ನ ದೊಡ್ಡ ಹೊಟ್ಟೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು, ಹಾಗೂ ಕೆಲವೊಂದು ತಮಾಷೆಯ ಕಮೆಂಟ್ ಕೂಡ ಬಂದಿತ್ತು. ಈ ವಿಡಿಯೋ 4.4 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳು ಮತ್ತು ಹತ್ತು ಸಾವಿರ ಕಾಮೆಂಟ್‌ಗಳನ್ನು ಗಳಿಸಿತು, ಹಲವು ಬಳಕೆದಾರರು ಈ ವಿಡಿಯೋಗೆ ಕಮೆಂಟ್ ಮಾಡಿದ್ದರು. ನೀವು ದೊಡ್ಡ ಮಗುವನ್ನು ಪಡೆಯುತ್ತೀರ ಎಂದು ಹೇಳಿದ್ದಾರೆ. ನಂತರದಲ್ಲಿ ಶೆಲ್ಬಿ ಮಾರ್ಟಿನ್ ಹೊಟ್ಟೆಯಲ್ಲಿರುವ ಮಗುವಿನ ಗಾತ್ರದ ಒಂದು ಫೋಟೋವನ್ನು ಕೂಡ ಹಂಚಿಕೊಂಡಿದ್ದರು. ಈ ಫೋಟೋಗೂ ಬಳಕೆದಾರರು ಕಮೆಂಟ್ ಮಾಡಿದ್ದರು, ಮಗು ಎಷ್ಟು ಸಮಯದಿಂದ ಒಳಗೆ ಇತ್ತು ಅಥವಾ ಅದು ಹೇಗೆ ಹುಟ್ಟಿರಬಹುದು ಎಂಬೆಲ್ಲ ಪ್ರಶ್ನೆಯನ್ನು ಕೇಳಿದರು.
