ಉದಯವಾಹಿನಿ, ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯ ಭಾರತ ತಂಡದಲ್ಲಿ ಈ ಬಾರಿ ಸ್ಪಿನ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾಗೆ ಸ್ಥಾನವನ್ನು ನೀಡಲಾಗಿಲ್ಲ. ಆದರೂ 2027ರ ಐಸಿಸಿ ಏಕದಿನ ವಿಶ್ವಕಪ್‌ ಭಾರತ ತಂಡದಲ್ಲಿ ಆಡುವ ವಿಶ್ವಾಸವನ್ನು ರವೀಂದ್ರ ಜಡೇಜಾ ವ್ಯಕ್ತಪಡಿಸಿದ್ದಾರೆ. ಇದೀಗ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡುತ್ತಿರುವ ಜಡೇಜಾ, ಈ ವರ್ಷದ ಆರಂಭದಲ್ಲಿ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದ ಭಾರತ ತಂಡದಲ್ಲಿಯೂ ಇದ್ದರು. ಇದರ ಹೊರತಾಗಿಯೂ ಅವರಿಗೆ ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಕೈ ಬಿಡಲಾಗಿದೆ.
ಮುಂದಿನ ಏಕದಿನ ವಿಶ್ವಕಪ್‌ ಟೂರ್ನಿಗೂ ಮುನ್ನ ಭಾರತ ತಂಡಕ್ಕೆ ಕೆಲವೇ ಏಕದಿನ ಪಂದ್ಯಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ರವೀಂದ್ರ ಜಡೇಜಾ ಅವರ ಏಕದಿನ ವಿಶ್ವಕಪ್‌ ಹಾದಿ ಬಹುತೇಕ ಮುಗಿದಿದೆ ಎಂದು ಹಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಡೆಲ್ಲಿ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರ ಜಡೇಜಾಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಅವರು, ಇದರ ಹಿಂದೆ ಟೀಮ್‌ ಮ್ಯಾನೇಜ್‌ಮೆಂಟ್‌ ಹಾಗೂ ಆಯ್ಕೆದಾರರ ಯೋಜನೆ ಬೇರೆ ಇದೆ. ಈ ಬಗ್ಗೆ ಅವರು ನನ್ನ ಬಳಿಕ ಸಂವಹನ ನಡೆಸಿದ್ದಾರೆಂದು ತಿಳಿಸಿದ್ದಾರೆ.
ನೋಡಿ, ಆಯ್ಕೆ ಮಾಡುವುದು ಅಥವಾ ಬಿಡುವುದು ನನ್ನ ಕೈಯಲ್ಲಿ ಇಲ್ಲ, ಹೌದು ಮುಂದಿನ ಏಕದಿನ ವಿಶ್ವಕಪ್‌ ಆಡಬೇಕೆಂದು ಬಯಸುತ್ತಿದ್ದೇನೆ. ದಿನದಾಂತ್ಯದಲ್ಲಿ ಆಯ್ಕೆದಾರರು, ಟೀಮ್‌ ಮ್ಯಾನೇಜ್‌ಮೆಂಟ್‌, ನಾಯಕ ಹಾಗೂ ಕೋಚ್‌ ನನ್ನನ್ನು ಈ ಸರಣಿಗೆ ಏಕೆ ಮಾಡಿಲ್ಲ ಎಂಬುದರ ಹಿಂದೆ ಕೆಲವು ಸಂಗತಿಗಳು ಇರಬಹುದು. ಇದರ ಹಿಂದೆ ಕೆಲ ಕಾರಣಗಳು ಖಂಡಿತಾ ಇವೆ,” ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.

“ತಂಡವನ್ನು ಪ್ರಕಟಿಸಿದಾಗ ನನ್ನ ಹೆಸರು ಇಲ್ಲದಿರುವಾಗ ನನಗೆ ಯಾವುದೇ ರೀತಿಯ ಅಚ್ಚರಿ ಇಲ್ಲ, ಏಕೆಂದರೆ ಅವರು ನನ್ನ ಬಳಿ ಮೊದಲೇ ಮಾತನಾಡಿದ್ದರು. ಹಾಗಾಗಿ ಅದು ಒಳ್ಳೆಯ ವಿಷಯ. ನಾಯಕ, ಆಯ್ಕೆದಾರ ಮತ್ತು ತರಬೇತುದಾರರು ಏನು ಯೋಚಿಸುತ್ತಿದ್ದಾರೆ ಮತ್ತು ಅದರ ಹಿಂದಿನ ಕಾರಣದ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ. ಆದ್ದರಿಂದ ನನಗೆ ಅದರ ಬಗ್ಗೆ ಸಂತೋಷವಾಗಿದೆ,” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!