ಉದಯವಾಹಿನಿ, ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಐಪಿಎಲ್ 2026ರಲ್ಲಿ ಭಾಗವಹಿಸಲು ಕೊನೆಯ ಕ್ಷಣದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ನಿಂದ ಹಿಂದೆ ಸರಿದರು. ಈ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯೋಚಿಸುತ್ತಿದೆ. ಮುಜರಬಾನಿ ಈ ಹಿಂದೆ ಪಿಎಸ್ಎಲ್ ಪ್ರವೇಶಿಸಲು ಇಸ್ಲಾಮಾಬಾದ್ ಯುನೈಟೆಡ್ ಜೊತೆ 1.10 ಕೋಟಿ ರೂ.ಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ, ಐಪಿಎಲ್‌ ನಲ್ಲಿ ಆಡಲು ಅನಿರೀಕ್ಷಿತ ಅವಕಾಶ ಸಿಕ್ಕ ನಂತರ ಅವರು ಪಿಎಸ್‌ಎಲ್‌ನಿಂದ ಹೊರನಡೆಯಲು ನಿರ್ಧರಿಸಿದರು.
ಮೂರು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಬದಲಿಗೆ ಮುಜರಬಾನಿಯನ್ನು ಆಯ್ಕೆ ಮಾಡಿತು. ಬಿಸಿಸಿಐ ಆದೇಶದಂತೆ ಮುಸ್ತಾಫಿಜುರ್ ಅವರನ್ನು ಕೆಕೆಆರ್ ಬಿಡುಗಡೆ ಮಾಡಿತು. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ 2026 ರಲ್ಲಿ ಮುಜರಬಾನಿ 13 ವಿಕೆಟ್‌ಗಳನ್ನು ಕಬಳಿಸಿದರು.
ಜಿಂಬಾಬ್ವೆ ಸೂಪರ್-8 ತಲುಪುವಲ್ಲಿ ಮುಜರಬಾನಿ ಪ್ರಮುಖ ಪಾತ್ರ ವಹಿಸಿದರು. ಅವರು ಮಾರ್ಚ್ 17 ರಂದು ಕೆಕೆಆರ್ ತಂಡವನ್ನು ಸೇರಲಿದ್ದಾರೆ. ಇತ್ತ ಮುಜರಬಾನಿ ಬದಲಿಗೆ ವೆಸ್ಟ್ ಇಂಡೀಸ್​​​ನ ಶಮರ್ ಜೋಸೆಫ್ ಯುನೈಟೆಡ್ ಜೊತೆ ಸಹಿ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!