ಉದಯವಾಹಿನಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯ 2024-25ರ ವಾರ್ಷಿಕ ನಮನ್ ಅವಾರ್ಡ್ಸ್ ವಿಜೇತರ ಪಟ್ಟಿಯನ್ನ ಮಾರ್ಚ್ 14, 2026ರಂದು ಘೋಷಣೆ ಮಾಡಿದೆ. ಭಾರತ ತಂಡದ ಟೆಸ್ಟ್ ನಾಯಕ ಶುಭ್​ಮನ್ ಗಿಲ್ ಮತ್ತು ಸ್ಮೃತಿ ಮಂಧಾನ ಅವರನ್ನು ಪುರುಷ ಮತ್ತು ಮಹಿಳಾ ತಂಡದ ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟರ್‌ಗಳಾಗಿ ಆಯ್ಕೆ ಮಾಡಲಾಗಿದೆ. ಹರ್ಷಿತ್ ರಾಣಾ ಪುರುಷರ ತಂಡದ ಅತ್ಯುತ್ತಮ ಪದಾರ್ಪಣೆ ಪ್ರಶಸ್ತಿ ಪಡೆದಿದ್ದಾರೆ. ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಮತ್ತು ಮಿಥಾಲಿ ರಾಜ್ ಅವರಿಗೆ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್ ಘೋಷಿಸಲಾಗಿದೆ. ಪ್ರಶಸ್ತಿ ಸಮಾರಂಭ ಮಾರ್ಚ್ 15ರಂದು ನವದೆಹಲಿಯಲ್ಲಿ ನಡೆಯಲಿದೆ.

ಪುರುಷರ ಅತ್ಯುತ್ತಮ ಕ್ರಿಕೆಟರ್: ಶುಭ್​​ಮನ್ ಗಿಲ್: ಪುರುಷರ ವರ್ಷದ ಅತ್ಯುತ್ತಮ ಪ್ರದರ್ಶನಕ್ಕೆ ನೀಡುವ ಪಾಲಿ ಉಮ್ರಿಗರ್ ಅವಾರ್ಡ್ ಅನ್ನು ಶುಭ್​ಮನ್ ಗಿಲ್ ಪಡೆದಿದ್ದಾರೆ. 2025ರಲ್ಲಿ ಗಿಲ್ ​​25 ಪಂದ್ಯಗಳಲ್ಲಿ 1565 ರನ್ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಟೆಸ್ಟ್ ಮತ್ತು ಓಡಿಐ ನಾಯಕರಾಗಿ ತಂಡಕ್ಕೆ ಮುಖ್ಯ ಕೊಡುಗೆ ನೀಡಿದ್ದಾರೆ. ಇದು ಅವರ ಕ್ರಿಕೆಟ್ ಜೀವನದ ಅತ್ಯುತ್ತಮ ವರ್ಷವಾಗಿದೆ.

ಸ್ಮೃತಿ ಮಂಧಾನ ಅವರು 36 ಪಂದ್ಯಗಳಲ್ಲಿ 1800 ರನ್ ಗಳಿಸಿ ಅತ್ಯುತ್ತಮ ಮಹಿಳಾ ಕ್ರಿಕೆಟರ್ ಪ್ರಶಸ್ತಿ ಪಡೆದಿದ್ದಾರೆ. ಮಹಿಳಾ ಓಡಿಐನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರಾಗಿದ್ದಾರೆ. ಏಕದಿನ ವಿಶ್ವಕಪ್​​​ನಲ್ಲಿ ತಂಡ ವಿಶ್ವಚಾಂಪಿಯನ್ ಆಗಲು ಅವರ ಪ್ರದರ್ಶನ ನಿರ್ಣಾಯಕವಾಗಿತ್ತು.

Leave a Reply

Your email address will not be published. Required fields are marked *

error: Content is protected !!