ಉದಯವಾಹಿನಿ, ಮುಂಬೈ: ಕಳೆದ ತಿಂಗಳು ಬಿಜೆಪಿ ಕಾರ್ಯಕರ್ತರಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾದ 73 ವರ್ಷದ ಪಕ್ಷದ ಕಾರ್ಯಕರ್ತ ಪ್ರಕಾಶ್ ಪಗಾರೆ ಅವರನ್ನು ಕಾಂಗ್ರೆಸ್ ಸನ್ಮಾನಿಸಿದೆ. ಈ ಸಂಬಂಧ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಕಲ್ಯಾಣ್‌ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಬಿಜೆಪಿ ಬೆಂಬಲಿಗರು ಪಗಾರೆ ಅವರಿಗೆ ಬಲವಂತವಾಗಿ ಸೀರೆ ಉಡಿಸಿದ ವಾರಗಳ ನಂತರ ಕಾಂಗ್ರೆಸ್ ಅವರಿಗೆ ಬೆಂಬಲ ಸೂಚಿಸಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಒಗ್ಗಟ್ಟು ಮತ್ತು ಗೌರವದ ಪ್ರದರ್ಶನವಾಗಿ, ಸಪ್ಕಲ್ ಪಗರೆ ಅವರನ್ನು ತಮ್ಮ ಹೆಗಲ ಮೇಲೆ ಎತ್ತಿಕೊಂಡರು. ಅವರಿಗೆ ಇತರ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಸಹಾಯ ಮಾಡಿದರು. ಪಕ್ಷದ ತಳಮಟ್ಟದ ಕಾರ್ಯಕರ್ತರ ಬೆಂಬಲವನ್ನು ದೃಢೀಕರಿಸುವುದು ಮತ್ತು ಪಗಾರೆ ಅವರಿಗೆ ಆಗಿರುವ ಅವಮಾನವನ್ನು ಖಂಡಿಸುವುದು ಈ ಬೆಂಬಲದ ಉದ್ದೇಶವಾಗಿತ್ತು.

Leave a Reply

Your email address will not be published. Required fields are marked *

error: Content is protected !!