ಉದಯವಾಹಿನಿ, ಕನ್ನಡ ಚಿತ್ರರಂಗದ ಭರವಸೆಯ ಹಾಗು ಪ್ರತಿಭಾನ್ವಿತ ನಾಯಕ ಕಮ್ ನಿರ್ದೇಶಕ ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ ʻಲವ್ ಒಟಿಪಿʼ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಪುಷ್ಪ ಮುನಿರೆಡ್ಡಿ ಅರ್ಪಿಸಿ ಭಾವಪ್ರೀತ ಪ್ರೊಡಕ್ಷನ್ ಸಂಸ್ಥೆಯಡಿ ವಿಜಯ್ ಎಂ.ರೆಡ್ಡಿ ನಿರ್ಮಾಣ ಮಾಡಿರುವ ಚಿತ್ರವನ್ನು ಅನೀಶ್ ನಿರ್ದೇಶನ ಮಾಡಿದ್ದಾರೆ.
ಒಟಿಪಿ ಅಂದರೆ ಓವರ್ ಟಾರ್ಚರ್ ಪ್ರೆಷರ್ ಎನ್ನುವ ಅಡಿಬರಹವಿದೆ. ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಪ್ರೀತಿ, ಪ್ರೇಮ, ಹೊಡೆದಾಟ, ಬಡಿದಾಟ, ಕ್ರಿಕೆಟ್, ಸ್ನೇಹ, ಅಪ್ಪ-ಮಗನ ಗಲಾಟೆ, ಕೌಟಂಬಿಕ ಕಥನ, ಪೊಲೀಸ್ ಠಾಣೆ ಸೇರಿದಂತೆ ಕಮರ್ಷಿಯಲ್ ಚಿತ್ರಕ್ಕಿರಬೇಕಾದ ಎಲ್ಲಾ ಅಂಶಗಳನ್ನ 2 ನಿಮಿಷ 24 ಸೆಕೆಂಡ್ ಇರುವ ಟ್ರೈಲರ್‌ನಲ್ಲಿ ಅಡಕ ಮಾಡಿದ್ದು ಚಿತ್ರದ ಬಗ್ಗೆ ಒಂದಷ್ಟು ಕುತೂಹಲ ಮತ್ತು ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
ನಾಯಕ ಅಕ್ಷಯ್‌ಗೆ ಕ್ರಿಕೆಟರ್ ಆಗಬೇಕು ಎನ್ನುವುದು ಚಿಕ್ಕವಯಸ್ಸಿನಿಂದ ಕಟ್ಟಿಕೊಂಡ ಕನಸು. ಆದ್ರೆ ಕ್ರಿಕೆಟ್‌ಗಿಂತ ಗ್ರೌಂಡಲ್ಲಿ ಗಲಾಟೆನೇ ಜಾಸ್ತಿ, ಈ ಗಲಾಟೆ ಎಲ್ಲಾ ಮ್ಯಾಚ್ ನಿಂದ ಅಲ್ಲ, ಲವ್ ಮತ್ತು ಗರ್ಲ್‌ಫೆಂಡ್ಸ್ ನಿಂದ. ಇಬ್ಬರು ಹುಡುಗಿರನ್ನು ಲವ್ ಆನಂತರ ಪಡುವ ಪಡಪಾಟಲು, ಕುಟುಂಬ, ಸ್ನೇಹಿತರು, ಪೋಲೀಸ್ ಠಾಣಗೆ ಹಲವು ವಿಷಯಗಳು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚು ಮಾಡಿದ್ದು ನಟ ಮತ್ತು ನಿರ್ದೇಶಕ ಅನೀಶ್ ತೇಜೇಶ್ವರ್ ಅವರ ಕೆಲಸದ ಇನ್ನಷ್ಟು ಭರವಸೆ ಹೆಚ್ಚು ಮಾಡಿದೆ.
