ಉದಯವಾಹಿನಿ, ಮುಂಬೈ: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾರನ್ನ ಕೇವಲ 3 ಎಸೆತಗಳಲ್ಲಿ ಔಟ್‌ ಮಾಡುತ್ತೇನೆ ಎಂದು ಪಾಕಿಸ್ತಾನದ ವೇಗಿ ಇಹ್ಸಾನುಲ್ಲಾ ಸವಾಲು ಹಾಕಿದ್ದಾರೆ. ಇಹ್ಸಾನುಲ್ಲಾ ಸವಾಲು ಹಾಕಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಶರ್ಮಾ ಅವರನ್ನು ಔಟ್‌ ಮಾಡಲು ಮೂರು ಎಸೆತಗಳನ್ನು ಸಾಕು ಎಂದು ತಿಳಿಸಿದ್ದಾರೆ.
ಅಭಿಷೇಕ್ ಶರ್ಮಾ ನನ್ನ ವಿರುದ್ಧ ಆರು ಎಸೆತಗಳಿಗಿಂತ ಹೆಚ್ಚು ಸಮಯ ಆಡುವುದಿಲ್ಲ. ನಾನು ಅವರನ್ನು ಮೂರು ಎಸೆತಗಳಲ್ಲಿ ಔಟ್ ಮಾಡುತ್ತೇನೆ ಎಂದು ಸವಾಲೆಸೆದಿದ್ದಾರೆ. ಇಹ್ಸಾನುಲ್ಲಾ ಬಲಗೈ ವೇಗದ ಬೌಲರ್ ಆಗಿದ್ದು, 2023 ರಲ್ಲಿ ಮುಲ್ತಾನ್ ಸುಲ್ತಾನ್ಸ್ ಪರ 5/12 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಪಿಎಸ್ಎಲ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಮತ್ತು ಬೌಲರ್ ಆಫ್ ದಿ ಟೂರ್ನಮೆಂಟ್ ಗೌರವಕ್ಕೂ ಭಾಜನರಾಗಿದ್ದಾರೆ. ಅವರ ಬೌಲಿಂಗ್ ವೇಗವು ಗಂಟೆಗೆ 144 ಕಿಮೀ ಸರಾಸರಿಯಲ್ಲಿದೆ.
2023 ರಲ್ಲಿ ಪಾಕಿಸ್ತಾನ ಪರ T20I ಮತ್ತು ODI ಎರಡರಲ್ಲೂ ಆಡಿದ್ದರು. 2023-24ರಲ್ಲಿ ಮೊಣಕೈ ಸಮಸ್ಯೆ ಎದುರಿಸಿದರು. ಮತ್ತೆ ಅವರ ಪುನರಾಗಮನವಾಗಿಲ್ಲ. 2025 ರ ಡ್ರಾಫ್ಟ್‌ನಲ್ಲಿ ಮಾರಾಟವಾಗದಿದ್ದಕ್ಕೆ PSL ಅನ್ನು ಬಹಿಷ್ಕರಿಸುವ ಪ್ರತಿಜ್ಞೆ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!