ಉದಯವಾಹಿನಿ,ಗಂಟಲು ನೋವು, ಗಂಟಲು ಗೊರಕೆ, ಗಂಟಲಿನಲ್ಲಿ ಉರಿ ಹಾಗೂ ಸರಿಯಾಗಿ ಮಾತನಾಡಲು ಆಗದೇ ಇರುವುದು.. ಹೀಗೆ ಅನೇಕ ಸಮಸ್ಯೆಗಳು ಕಂಡುಬರುತ್ತವೆ. ಈ ಸಮಸ್ಯೆಗಳು ಅನೇಕ ದಿನಗಳವರೆಗೆ ಮುಂದುವರಿದರೆ ನಿರ್ಲಕ್ಷಿಸಲೇಬಾರದು. ಏಕೆಂದರೆ, ಇವು ಗಂಟಲು ಕ್ಯಾನ್ಸರ್‌ನ ಸೂಚನೆಯಾಗಿರಬಹುದು.
ನುಂಗಲು ತೊಂದರೆ: ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನರು ಗಂಟಲಿನಲ್ಲಿ ಏನಾದರೂ ನಿರ್ಬಂಧಿಸಲ್ಪಟ್ಟಂತೆ ಇಲ್ಲವೇ ನುಂಗಲು ತೊಂದರೆ ಅನುಭವಿಸಬಹುದು. ಇದನ್ನು ‘ಡಿಸ್ಫೇಜಿಯಾ’ ಎಂದು ಕರೆಯಲಾಗುತ್ತದೆ. ಗಂಟಲಿನಲ್ಲಿ ರೂಪುಗೊಂಡ ಗೆಡ್ಡೆಗಳು ಅನ್ನನಾಳ ಇಲ್ಲವೇ ಧ್ವನಿಪೆಟ್ಟಿಗೆಯ ಮೇಲೆ ಒತ್ತಡ ಹೇರಿದಾಗ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ. ನಿರಂತರವಾಗಿ ನುಂಗಲು ತೊಂದರೆಯಾದರೆ ಅದರಲ್ಲೂ ವಿಶೇಷವಾಗಿ ಗಟ್ಟಿಯಾದ ಆಹಾರಗಳ ಸೇವನೆಯಲ್ಲಿ ತೊಂದರೆ ಉಂಟಾದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ತೂಕ ನಷ್ಟ: ಯಾವುದೇ ವ್ಯಾಯಾಮಗಳ ಪ್ರಯತ್ನವಿಲ್ಲದೆ ತೂಕ ನಷ್ಟವು ಗಂಟಲು ಕ್ಯಾನ್ಸರ್ ಸೇರಿದಂತೆ ಅನೇಕ ಕ್ಯಾನ್ಸರ್‌ಗಳ ಸಂಕೇತವಾಗಿದೆ. ಕ್ಯಾನ್ಸರ್ ಹಸಿವಿನ ಕೊರತೆ ಅಥವಾ ದೇಹದ ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು. ಆಹಾರ, ವ್ಯಾಯಾಮವಿಲ್ಲದೆ ತೂಕ ಇಳಿದರೆ ಜಾಗರೂಕರಾಗಿರಬೇಕು.ನಿರಂತರವಾಗಿ ಕೆಮ್ಮು: ಶೀತ, ಅಲರ್ಜಿ ಹಾಗೂ ಇತರ ಉಸಿರಾಟದ ಸಮಸ್ಯೆಗಳನ್ನು ಲೆಕ್ಕಿಸದೆ ನಿರಂತರ ಕೆಮ್ಮು ಇದ್ದರೆ, ಅದು ಕಳವಳಕಾರಿ ವಿಷಯವಾಗಿದೆ.
ಕಿವಿ ನೋವು: ಯಾವುದೇ ಕಾರಣವಿಲ್ಲದೆ ಕಿವಿ ನೋವು ಗಂಟಲು ಕ್ಯಾನ್ಸರ್‌ನ ಲಕ್ಷಣವಾಗಿದೆ ಎಂದು ಮಯೋಕ್ಲಿನಿಕ್ ಅಧ್ಯಯನ ಹೇಳುತ್ತದೆ. ಆರಂಭಿಕ ಹಂತಗಳಲ್ಲಿ ಇದು ವಿಶೇಷವಾಗಿ ಸಾಮಾನ್ಯವಾಗಿದೆ.
ಉಸಿರಾಟದ ತೊಂದರೆ: ಉಸಿರಾಟದ ತೊಂದರೆ ಗಂಟಲು ಕ್ಯಾನ್ಸರ್‌ನ ಲಕ್ಷಣ ಎಂದು nhs.uk ನಡೆಸಿದ ಅಧ್ಯಯನವು ವಿವರಿಸುತ್ತದೆ. ಉಸಿರಾಡುವಾಗ ಶಬ್ದವೂ ಇರಬಹುದು ಮತ್ತು ಸ್ವಲ್ಪ ಕೆಲಸಗಳನ್ನು ಮಾಡುವಾಗ ಉಸಿರಾಡಲು ಕಷ್ಟವಾದರೆ ನಿರ್ಲಕ್ಷಿಸಬಾರದು.
ನಿರಂತರ ದುರ್ವಾಸನೆ: ಈ ಸಮಸ್ಯೆ ಗಂಟಲು ಕ್ಯಾನ್ಸರ್‌ಗೆ ಒಂದು ಕಾರಣವಾಗಿದೆ. ಸರಿಯಾದ ಮೌಖಿಕ ನೈರ್ಮಲ್ಯದ ಹೊರತಾಗಿಯೂ ಬಾಯಿಯ ದುರ್ವಾಸನೆ ಕಡಿಮೆಯಾಗದಿದ್ದರೆ, ಇದು ಗಂಟಲಿನ ಕ್ಯಾನ್ಸರ್‌ನಂತಹ ಆಂತರಿಕ ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು.
ಗಂಟಲಿನಲ್ಲಿ ಗಡ್ಡೆಗಳು, ಚುಕ್ಕೆಗಳು: ಸಾಮಾನ್ಯವಾಗಿ ಗುಣವಾಗದ ಬಾಯಿ ಅಥವಾ ಗಂಟಲಿನಲ್ಲಿ ಗಡ್ಡೆಗಳು, ಕಲೆಗಳು ಅಥವಾ ಹುಣ್ಣುಗಳು ಗಂಟಲಿನ ಕ್ಯಾನ್ಸರ್‌ನ ಚಿಹ್ನೆಗಳಾಗಿರಬಹುದು. ಇವು ಬಿಳಿ, ಕೆಂಪು ಅಥವಾ ಎರಡರ ಸಂಯೋಜನೆಯಾಗಿರಬಹುದು.
