ಉದಯವಾಹಿನಿ, ತೂಕ ಇಳಿಸಿಕೊಳ್ಳಲು ನಮ್ಮ ದೇಹಕ್ಕೆ ಪ್ರತಿದಿನ ಬೇಕಾಗುವ ಪ್ರೋಟೀನ್ ಅಗತ್ಯವನ್ನು ಸರಿಯಾಗಿ ತೆಗೆದುಕೊಂಡರೆ, ತ್ವರಿತವಾಗಿ ನಾವು ಉತ್ತಮ ಫಲಿತಾಂಶಗಳನ್ನು ನೋಡಬಹುದು. ಆದರೆ ಅನೇಕ ಮಂದಿ ಆ ಪ್ರೋಟೀನ್ ಅಗತ್ಯವನ್ನು ಪೂರೈಸಿಕೊಳ್ಳಲು ಪರದಾಡುತ್ತಿದ್ದಾರೆ. ಅಂತಹವರಲ್ಲಿ ನೀವು ಒಬ್ಬರಾಗಿದ್ದರೆ, ಇನ್ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಇದೊಂದು ತರಕಾರಿ ತಿಂದರೆ ಸಾಕು ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಆ ತರಕಾರಿ ಯಾವುದಪ್ಪಾ ಅಂತೀರಾ? ಅದು ಮತ್ಯಾವುದು ಅಲ್ಲ, ಅವರೆಕಾಳು
ಅವರೆಕಾಳನ್ನು ಹಸಿರು/ಹಣ್ಣಾಗದ ಸೋಯಾಬೀನ್ (ಅಥವಾ ಸೋಯಾ ಬೀನ್ಸ್) ಎಂದು ಕರೆಯಲಾಗುತ್ತದೆ. ಇವುಗಳನ್ನು ಇಂಗ್ಲಿಷ್‌ನಲ್ಲಿ ಎಡಮೇಮ್ (Edamame) ಎಂದು ಕರೆಯಲಾಗುತ್ತದೆ. ತೂಕ ಇಳಿಸುವಲ್ಲಿ ಇವು ಬಹಳ ಸಹಾಯಕವಾಗಿವೆ ಎಂದು ತಜ್ಞರು ಹೇಳುತ್ತಾರೆ. ಇವು ಬಹಳಷ್ಟು ಸಸ್ಯ ಆಧಾರಿತ ಪ್ರೋಟೀನ್ ಅನ್ನು ಹೊಂದಿರುತ್ತವೆ ಮತ್ತು ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತವೆ. ಇವು ಪ್ರಮುಖವಾಗಿ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದೇಗಪ್ಪ ಸಾಧ್ಯ ಅಂತೀರಾ? ಅವರೆಕಾಳು ತಿನ್ನುವುದರಿಂದ ಯಾವುದಾದರೂ ಅಡ್ಡಪರಿಣಾಮಗಳಿವೆಯೇ ಎಂಬುದರ ಬಗ್ಗೆ ಕೆಲವೊಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ. ಆಹಾರ ಮತ್ತು ಪೌಷ್ಟಿಕಾಂಶ ವಿಜ್ಞಾನ ಸಂಶೋಧನೆಯ ಪ್ರಕಾರ, ಅವರೆಕಾಳು ನಿಮಗೆ ಸುಲಭವಾಗಿ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ, ಹೀಗಾಗಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿರುವ ಅವರೆಕಾಳು ನಿಮಗೆ ಸುಲಭವಾಗಿ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇದು ನಿಮಗೆ ಮತ್ತೆ ಹಸಿವಾಗುವ ಸಮಯವನ್ನು ವಿಳಂಬಗೊಳಿಸುತ್ತದೆ. ಇದು ನೀವು ತಿನ್ನುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಪರೋಕ್ಷವಾಗಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ಕ್ಯಾಲೋರಿ ಕಡಿತ ಆಹಾರಕ್ರಮದಲ್ಲಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಅವರೆಕಾಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವುದರಿಂದ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಇದನ್ನು ಮಿತವಾಗಿ ಸೇವಿಸುವುದು ಮುಖ್ಯ.

Leave a Reply

Your email address will not be published. Required fields are marked *

error: Content is protected !!