ಉದಯವಾಹಿನಿ,ನವದೆಹಲಿ: ಜೀವನದಲ್ಲಿ ನಡೆದ ಕೆಲ ಘಟನೆಗಳ ಆಧಾರದ ಮೇಲೆ ಸಿನಿಮಾ ಮಾಡೋದು ಸಹಜ, ಆದರೇ ಜೀವನೇ ಒಂದು ಸಿನಿಮಾ ತರ ಆದ್ರೆ? ಹೌದು… ಬಿಹಾರ (ಮೂಲದ ರಸಾಯನಶಾಸ್ತ್ರ (Chemistry Scholar) ಪ್ರಾಧ್ಯಪಕನೊಬ್ಬನ ಜೀವನ ಯಾವ ಸಿನಿಮಾಗೂ ಕಮ್ಮಿ ಇಲ್ಲ. ಅನಾರೋಗ್ಯ, ಆರ್ಥಿಕ ಸಂಕಷ್ಟಗಳಿಂದಾಗಿ ವಿದ್ಯಾವಂತನಾಗಿದ್ದರೂ ಅಪರಾಧದ ಹಾದಿ ಹಿಡಿದು ಇದೀಗ ಪೊಲೀಸರ ಅಥಿತಿ ಆಗಿದ್ದಾನೆ. ಈ ಸುದ್ದಿ ಭಾರೀ ವೈರಲ್ (ಆಗಿದೆ.
2017, 2021ರಲ್ಲಿ ದೆಹಲಿ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ದೀಪ್ ಶುಭಂ, ಹರಿಯಾಣದ ಸೋಹ್ನಾ ಪ್ರದೇಶ (Haryana’s Sohna Area)ದಲ್ಲಿ ಕಾಣಿಸಿಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಬಳಿಕ ತಂತ್ರಜ್ಞಾನ, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಸೀತಾಮರ್ಹಿ ಜಿಲ್ಲೆಯ 32 ವರ್ಷದ ದೀಪ್ ಶುಭಂ, ದೆಹಲಿಯ ಪ್ರತಿಷ್ಠಿತ ಕಾಲೇಜ್‌ವೊಂದರಿಂದ ರಸಾಯನಶಾಸ್ತ್ರ ವಿಷಯದಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿದ್ದ. ಬಳಿಕ ಎಂ.ಫಿಲ್ ಪದವಿಯನ್ನೂ ಪಡೆದು, ಕಾನೂನು ಅಧ್ಯಯನ ಮಾಡಲು ನಿರ್ಧರಿಸಿದ್ದ. ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ ಕೂಡ ಅದ.
