ಉದಯವಾಹಿನಿ, ಹೈದರಾಬಾದ್: ಬಾಲಾಪರಾಧಿ ಗೃಹದಲ್ಲಿ ಆರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೇಲ್ವಿಚಾರಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದಸರಾ ರಜೆ ಹಿನ್ನಲೆ ಮನೆಗೆ ಹೋಗಿದ್ದ ಬಾಲಕ ಹಿಂದಿರುಗಿ ಹೋಗಲು ಹಿಂದೇಟು ಹಾಕಿ ಹಠ ಹಿಡಿದಿದ್ದು, ಈ ಕುರಿತು ಪೋಷಕರು ಪ್ರಶ್ನಿಸಿದಾಗ ಅಸಹಜ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಘಟನೆ ಹೆತ್ತವರ ಗಮನಕ್ಕೆ ಬಂದ ಹಿನ್ನಲೆ ಪೊಲೀಸರಿಗೆ ದೂರು ನೀಡಲಾಗಿದೆ.
ಸೈದಾಬಾದ್‌ನಲ್ಲಿರುವ ಬಾಲಾಪರಾಧಿ ಗೃಹದಲ್ಲಿ ಈ ದುಷ್ಕೃತ್ಯ ನಡೆದಿದ್ದು, ಅಧಿಕಾರಿಗಳು ಹಂಚಿಕೊಂಡ ಮಾಹಿತಿ ಪ್ರಕಾರ ದೌಜರ್ನ್ಯಕ್ಕೆ ಒಳಗಾದ ಸಂತ್ರಸ್ತ ಬಾಲಕ ದಸರಾ ರಜೆ ಹಿನ್ನಲೆ ಮನೆಗೆ ತೆರಳಿದ್ದು, ಅಲ್ಲಿಂದ ಬಾಲಾಪರಾಧಿ ಗೃಹಕ್ಕೆ ತೆರಳಲು ನಿರಾಕಾರಿಸಿದ್ದಾನೆ. ಬಾಲಕನ ವರ್ತನೆ ಕಂಡು ಚಿಂತೆಗೀಡಾದ ತಾಯಿ ಇದಕ್ಕೆ ಕಾರಣ ತಿಳಿದುಕೊಳ್ಳಲು ಮುಂದಾಗಿದ್ದು, ಏನಾಯಿತು ಎಂದು ಮಗನನ್ನು ಪ್ರಶ್ನಿಸಿದ್ದಾಳೆ.ಅಮ್ಮನ ಬಳಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟಿದ್ದು, ವಿಷಯ ತಿಳಿಯುತ್ತಿದಂತೆ ಬಾಲಕನ ತಾಯಿ ಪೊಲೀಸ್ ಠಾಣೆ ಮೇಟ್ಟಿಲೇರಿದ್ದು, ಬಾಲಾಪರಾಧಿ ಗೃಹದ ಮೇಲ್ವಿಚಾರಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
