ಉದಯವಾಹಿನಿ, ಬ್ರಿಡ್ಜ್‌ಟೌನ್‌: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಬಾರ್ಬಡೋಸ್ ಸಂಸತ್ತಿಗೆ ಭೇಟಿ ನೀಡಿದ್ದಾರೆ. 68ನೇ ಅಂತರರಾಷ್ಟ್ರೀಯ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಭಾಗವಹಿಸಲು ಬಾರ್ಬಡೋಸ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಯು.ಟಿ.ಖಾದರ್ ಅವರು ಬಾರ್ಬಡೋಸ್ ಸಂಸತ್ತಿಗೆ ಭೇಟಿ ನೀಡಿದರು. ಬಾರ್ಬಡೋಸ್ ಸಂಸತ್ತಿನ ಸಭಾಧ್ಯಕ್ಷರ ಪೀಠವು ಭಾರತದಿಂದ ಕೊಡಲ್ಪಟ್ಟಿದೆ. ಇದು ಭಾರತ ಮತ್ತು ಬಾರ್ಬಡೋಸ್ ನಡುವಿನ ಸ್ನೇಹ ಮತ್ತು ಸಂಸತ್ತೀಯ ಸಹಕಾರದ ಸಂಕೇತವಾಗಿದೆ.
ಈ ಸಮ್ಮೇಳನವು ಬಾರ್ಬಡೋಸ್ ಶಾಸಕಾಂಗದ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಅಂತರ-ಸಂಸದೀಯ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಅವಕಾಶವನ್ನು ಒದಗಿಸಿತು.

 

Leave a Reply

Your email address will not be published. Required fields are marked *

error: Content is protected !!