ಉದಯವಾಹಿನಿ, ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಎರಡನೇ ಹಾಡು ರಿಲೀಸ್ ಆಗಿ ಅಪಾರ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾದ ನಾಯಕಿ ರಚನಾ ರೈ ಹಾಡಿನ ಸ್ಟಿಲ್‍ಗಳನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಅದರ ಜೊತೆಗೆ ನಟ ಚಾಲೆಂಜಿಂಗ್‍ಸ್ಟಾರ್ ದರ್ಶನ್ ಜೊತೆ ನಟಿಸಿದ ಅನುಭವ, ಶೂಟಿಂಗ್ ಸೆಟ್‍ನಲ್ಲಿ ದರ್ಶನ್ ನಡೆದುಕೊಂಡ ರೀತಿಯ ಬಗ್ಗೆ ಹಂಚಿಕೊಂಡಿದ್ದಾರೆ.
ಸಾಮಾಜಿಕ ಪೋಸ್ಟ್ ಹಂಚಿಕೊಂಡಿರುವ ರಚನಾ ರೈ, `ನಿಮ್ಮಂಥಹಾ ಸೂಪರ್ ಸ್ಟಾರ್ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಅದೃಷ್ಟ. ಸೆಟ್‍ನಲ್ಲಿ ನಿಮ್ಮ ಏಕಾಗ್ರತೆ, ನಿಮ್ಮ ತಾಳ್ಮೆ ಮತ್ತು ನಿಮ್ಮ ಅಚಲ ಸಮರ್ಪಣೆ, ಪಾತ್ರಗಳಿಗೆ ಜೀವ ತುಂಬುವ ನಿಮ್ಮ ಆ ಪ್ರಕ್ರಿಯೆಗಳನ್ನು ಪ್ರತಿದಿನವೂ ಸೆಟ್‍ನಲ್ಲಿ ನೋಡುವುದು ನನಗೆ ಒಂದು ಅದ್ಭುತ ಪಾಠವಾಯ್ತು. ಕ್ಯಾಮೆರಾ ಮುಂದೆ ಮಾತ್ರವಲ್ಲದೆ ಕ್ಯಾಮೆರಾ ಹಿಂದೆ ನಿಮ್ಮ ಪ್ರೀತಿ, ಆಪ್ತತೆ, ದಯೆ ನಿಮ್ಮ ವ್ಯಕ್ತಿತ್ವ ಇತರರಲ್ಲಿ ದೊಡ್ಡ ಛಾಪು ಮೂಡಿಸುತ್ತದೆ. ನಾನು ಭೇಟಿ ಆಗಿರುವ ಅದ್ಭುತ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಒಬ್ಬ ಅದ್ಭುತ ಸಹನಟ ಆಗಿದ್ದಕ್ಕೆ ನಿಮಗೆ ಧನ್ಯವಾದಗಳು. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಅದ್ಭುತ ವ್ಯಕ್ತಿಯಾಗಿ ಜೊತೆಗಿದ್ದಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
