ಉದಯವಾಹಿನಿ, ನವದೆಹಲಿ: ರಾಜ್ಯದಲ್ಲಿ ಜಾತಿಗಣತಿ ಹೊತ್ತಲ್ಲೇ ಮುಂದಿನ ವರ್ಷದ ಫೆಬ್ರವರಿಯಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಆದಾಯ ಸಮೀಕ್ಷೆ ಕಾರ್ಯ ಆರಂಭಿಸಲಿದೆ. ಇದೇ ಮೊದಲ ಬಾರಿಗೆ ಮನೆ ಮಂದಿಯ ಜೀವನ ಸ್ಥಿತಿ, ಆದಾಯ, ಖರ್ಚಿನ ಡೇಟಾ ಸಂಗ್ರಹಿಸಲಿದ್ದು, ದೇಶದ ಬಡತನ ಸ್ಥಿತಿಗತಿ ಬಗ್ಗೆ ತಿಳಿದು ಬರಲಿದೆ.ಕೇಂದ್ರ ಸರ್ಕಾರದ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಅಂಕಿ ಅಂಶ ಕಚೇರಿ ವತಿಯಿಂದ ರಾಷ್ಟ್ರೀಯ ಗೃಹ ಆದಾಯ ಸಮೀಕ್ಷೆ ಪ್ರಾರಂಭಿಸಲು ನಿರ್ಧರಿಸಲಾಗಿದೆ.ಈ ಸಮೀಕ್ಷೆಯೂ ಮನೆಯ ಆದಾಯವನ್ನು ಅಳೆಯುವತ್ತ ಗಮನಹರಿಸಿದ ಮೊದಲ ಪ್ಯಾನ್-ಇಂಡಿಯಾ ಸಮೀಕ್ಷೆಯಾಗಿದ್ದು, ಭಾರತದ ಸಾಮಾಜಿಕ-ಆರ್ಥಿಕ ಅಂಕಿಅಂಶಗಳ ವ್ಯವಸ್ಥೆಯಲ್ಲಿ ದೀರ್ಘಕಾಲದ ದತ್ತಾಂಶ ಅಂತರವನ್ನು ತೋರುವ ಮಹತ್ವದ ಹೆಜ್ಜೆ ಇದಾಗಿದೆ.ರಾಷ್ಟ್ರೀಯ ಗೃಹ ಆದಾಯ ಸಮೀಕ್ಷೆ ಜನರ ಜೀವನ ಪರಿಸ್ಥಿತಿಗಳು ಮತ್ತು ಆದಾಯ ಮತ್ತು ವೆಚ್ಚದ ಮಾದರಿಗಳ ಮಾಹಿತಿಯನ್ನು ಒದಗಿಸುತ್ತದೆ. ಪ್ರಪಂಚದಾದ್ಯಂತದ ದೇಶಗಳಲ್ಲಿನ ಸಮುದಾಯಗಳಲ್ಲಿನ ಬಡತನ ಮತ್ತು ಕಷ್ಟಗಳನ್ನು ವಿಶ್ಲೇಷಿಸಲು ಈ ದತ್ತಾಂಶವನ್ನು ಬಳಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!